ವಾರಾಣಸಿ: ರಷ್ಯಾ–ಉಕ್ರೇನ್ ಯದ್ಧದಿಂದ ನೊಂದಿದ್ದೇನೆ, ಶಾಂತಿ ಬೇಕಿದೆ ಎಂದು ರಷ್ಯಾ ಮೂಲದ ಮಹಿಳೆಯೊಬ್ಬರು ವಾರಾಣಸಿಗೆ ಬಂದು ತಾಂತ್ರಿಕ ದೀಕ್ಷೆ ಪಡೆದುಕೊಂಡಿದ್ದಾರೆ.
ಮಾಸ್ಕೋ ನಿವಾಸಿ ಇಂಗಾ ಬರದೋಷ್ ಎನ್ನುವ ಮಹಿಳೆ ಕಾಶಿಯಲ್ಲಿ ಮಾತಾ ಸಿದ್ಧಿದಾತ್ರಿಯ ತಾಂತ್ರಿಕ ದೀಕ್ಷೆ ಪಡೆದರು. ಬಳಿಕ ಕಶ್ಯಪ ಗೋತ್ರ ಸ್ವೀಕರಿಸಿ, ಹೆಸರನ್ನು ‘ಇಂಗಾನಂದಮಾಯಿ ಮಾ’ ಎಂದು ಬದಲಾಯಿಸಿಕೊಂಡಿದ್ದಾರೆ.
ದೀಕ್ಷೆಯನ್ನು ಸ್ವೀಕರಿಸಿದ ನಂತರ ಮಾತನಾಡಿದ ಅವರು, ‘ಮನಸ್ಸು ಈಗ ಶಾಂತವಾಗಿದೆ. ರಷ್ಯಾ-ಉಕ್ರೇನ್ ಯುದ್ಧದಿಂದ ನಾನು ನೊಂದಿದ್ದೇನೆ. ಶಾಂತಿಗಾಗಿ ಮಾತಾ ಸಿದ್ಧಿದಾತ್ರಿಯನ್ನು ಪ್ರಾರ್ಥಿಸುತ್ತೇನೆ’ ಎಂದಿದ್ದಾರೆ.
ಶಿವಾಳದಲ್ಲಿರುವ ವಾಗ್ಯೋಗ ಚೇತನ ಪೀಠದಲ್ಲಿ ಪಂಡಿತ ಆಶಾಪತಿ ಶಾಸ್ತ್ರಿ ಅವರು ಇಂಗಾ ಬರದೋಷ್ ಅವರಿಗೆ ಮಾತಾ ಸಿದ್ಧಿದಾತ್ರಿಯ ತಾಂತ್ರಿಕ ದೀಕ್ಷೆ ನೀಡಿದರು.
ಇಂಗಾ ಬರದೋಷ್ ಸಂಪೂರ್ಣ ಸನಾತನಿಯಾಗಿ ಹಳದಿ ಸೀರೆ ಧರಿಸಿ ಪೂಜೆಯಲ್ಲಿ ಭಾಗಿಯಾಗಿದ್ದರು. ಗುರುಮಂತ್ರವನ್ನು ತೆಗೆದುಕೊಂಡ ನಂತರ, ಇಂಗಾ ಅವರು ಹೆಸರು ಮತ್ತು ಗೋತ್ರವೂ ಬದಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.