ನವದೆಹಲಿ: ಇದೇ 25ರಂದು ನಡೆಯಬೇಕಿದ್ದ ಸಾರ್ಕ್ ದೇಶಗಳ ವಿದೇಶಾಂಗ ಸಚಿವರ ಸಭೆ ರದ್ದಾಗಿದೆ. ಈ ಸಭೆಗೆ ಅಫ್ಗಾನಿಸ್ತಾನವನ್ನು ಪ್ರತಿನಿಧಿಸಲು ತಾಲಿಬಾನ್‌ಗೆ ಅವಕಾಶ ಕಲ್ಪಿಸಬೇಕು ಎಂದು ಪಾಕಿಸ್ತಾನ ಬೇಡಿಕೆ ಇಟ್ಟಿತ್ತು. ಆದರೆ ಭಾರತ ಸೇರಿದಂತೆ ಒಕ್ಕೂಟದ ಬಹುತೇಕ ರಾಷ್ಟ್ರಗಳು ಪಾಕ್ ಬೇಡಿಕೆಯನ್ನು ತಿರಸ್ಕರಿಸಿದ ಕಾರಣ ಸಭೆ ರದ್ದಾಗಿದೆ.
ನ್ಯೂಯಾರ್ಕ್‌ನಲ್ಲಿ ನಡೆಯಲಿರುವ ವಿಶ್ವಸಂಸ್ಥೆಯ ಸಾಮಾನ್ಯ ಸಭೆಗೂ ಮುನ್ನ ಸಾರ್ಕ್ ದೇಶಗಳ ವಿದೇಶಾಂಗ ಸಚಿವರ ಸಭೆ ನಡೆಯಬೇಕಿತ್ತು. ಆದರೆ ಸದಸ್ಯ ರಾಷ್ಟ್ರಗಳ ಒಮ್ಮತದ ಕೊರತೆಯ ಕಾರಣ ಸಭೆ ನಡೆಯುವುದಿಲ್ಲ ಎಂದು ಸಾರ್ಕ್‌ನ ಅಧ್ಯಕ್ಷತೆ ವಹಿಸಿರುವ ನೇಪಾಳ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.