ಇಸ್ಲಾಮಾಬಾದ್:ಸಾರ್ಕ್ ಶೃಂಗದ ಪ್ರಧಾನ ಕಾರ್ಯದರ್ಶಿ ಇಸಾಲಾ ರುವನ್ ವೀರಕೂನ್ ಅವರು ಡಿ.22ರಿಂದ ನಾಲ್ಕು ದಿನ ಪಾಕ್ ಪ್ರವಾಸ ಕೈಗೊಳ್ಳುವರು. ಈ ವೇಳೆ ಅವರು ಪ್ರಧಾನಿ ಇಮ್ರಾನ್ ಖಾನ್, ವಿದೇಶಾಂಗ ಸಚಿವ, ಅಧಿಕಾರಿಗಳ ಜೊತೆಗೆ ಚರ್ಚಿಸುವರು.
ಮಾರ್ಚ್ 2020ರಲ್ಲಿ ಪ್ರಧಾನ ಕಾರ್ಯದರ್ಶಿಯಾಗಿ ನೇಮಕವಾದ ನಂತರ ಇದು ಅವರ ಮೊದಲ ಭೇಟಿಯಾಗಿದೆ.
ಸಾರ್ಕ್ ಒಕ್ಕೂಟದ ಉದ್ದೇಶ ಮತ್ತು ಗುರಿ ಸಾಧನೆಗೆ ಪಾಕ್ ಬದ್ಧತೆ ಪುನರುಚ್ಚರಿಸಲು ಹಾಗೂ ಸಾರ್ಕ್ ರಾಷ್ಟ್ರಗಳ ವಲಯದಲ್ಲಿ ಶಾಂತಿ ಸ್ಥಾಪನೆ, ಭದ್ರತೆ ಮತ್ತು ಅಭಿವೃದ್ಧಿಗೆ ಒತ್ತು ನೀಡುವ ಕುರಿತು ಈ ಭೇಟಿಯ ವೇಳೆ ಪ್ರಮುಖವಾಗಿ ಚರ್ಚೆ ನಡೆಯುವ ಸಂಭವವಿದೆ.
ಸಾರ್ಕ್ ಒಕ್ಕೂಟದ ಸದಸ್ಯ ರಾಷ್ಟ್ರಗಲ್ಲಿ ಭಾರತ, ಪಾಕ್, ಶ್ರೀಲಂಕಾ ಸೇರಿದಂತೆ ಈ ಭಾಗದ ಎಂಟು ರಾಷ್ಟ್ರಗಳಿವೆ. 2014ರ ಕಠ್ಮಂಡುವಿನಸಾರ್ಕ್ ಶೃಂಗಸಭೆಯ ನಂತರ ಮತ್ತೆ ಶೃಂಗಸಭೆ ನಡೆದಿಲ್ಲ. ಹೀಗಾಗಿ, 2016ರ ನಂತರ ಸಾರ್ಕ್ ಕಾರ್ಯ ಅಷ್ಟು ಪರಿಣಾಮಕಾರಿಯಾಗಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.