ತಿರುವನಂತಪುರ: ಶಬರಿಮಲೆಯ ಅಯ್ಯಪ್ಪ ದೇವಸ್ಥಾನಕ್ಕೆ ಭಕ್ತರು ಕಾಣಿಕೆ ರೂಪದಲ್ಲಿ ನೀಡಿರುವ ವಸ್ತುಗಳು ನಾಪತ್ತೆಯಾಗಿಲ್ಲ ಎಂದು ಲೆಕ್ಕಪರಿಶೋಧನಾ ತಂಡ ಸೋಮವಾರ ಹೇಳಿದೆ.
40 ಕೆ.ಜಿ ಚಿನ್ನ ಮತ್ತು 100 ಕೆ.ಜಿ ಬೆಳ್ಳಿ ನಾಪತ್ತೆಯಾಗಿದೆ ಎಂಬ ಆರೋಪ ಕೇಳಿ ಬಂದಿದ್ದರಿಂದ ದೇವಸ್ಥಾನದ ಸ್ಟ್ರಾಂಗ್‌ರೂಂನಲ್ಲಿರುವ ದಾಖಲೆಗಳು ಹಾಗೂ ವಸ್ತುಗಳ ಲೆಕ್ಕಪರಿಶೋಧನಾ ಕಾರ್ಯ ನಡೆಸಲಾಯಿತು.
ದೇವಸ್ಥಾನದಿಂದ 75 ಕಿ.ಮೀ ದೂರದಲ್ಲಿರುವ ಪತ್ತನಂತಿಟ್ಟ ಜಿಲ್ಲೆಯ ಆರನ್ಮುಳದಲ್ಲಿರುವ ಸ್ಟ್ರಾಂಗ್‌ರೂಂನಲ್ಲಿರುವ ದಾಖಲೆಗಳು ಹಾಗೂ ವಸ್ತುಗಳ ಪರಿಶೀಲನೆಯನ್ನು ಲೆಕ್ಕಪರಿಶೋಧನಾ ತಂಡ ನಡೆಸಿತು.ಭೌತಿಕವಾಗಿ ಚಿನ್ನ–ಬೆಳ್ಳಿ ಪ್ರಮಾಣವನ್ನು ಪರಿಶೀಲಿಸಲು ತಂಡವು ನಿರಾಕರಿಸಿತು.
‘ಚಿನ್ನ ಮತ್ತು ಬೆಳ್ಳಿ ನಾಪತ್ತೆಯಾಗಿವೆ ಎಂಬ ಆರೋಪ ನಿರಾಧಾರ’ ಎಂದು ದೇವಸ್ಥಾನ ನಿರ್ವಹಣೆ ಮಾಡುತ್ತಿರುವ ತಿರುವಾಂಕೂರು ದೇವಸ್ವಂ ಮಂಡಳಿ ಅಧ್ಯಕ್ಷ ಎ.ಪದ್ಮಕುಮಾರ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.