ADVERTISEMENT

ಶಬರಿಮಲೆ: ಇಂದಿನಿಂದ ಅಯ್ಯಪ್ಪನ ದರ್ಶನ

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2022, 15:41 IST
Last Updated 16 ನವೆಂಬರ್ 2022, 15:41 IST
ವಾರ್ಷಿಕ ಮಂಡಲಂ– ಮಕರವಿಲಕ್ಕು ಆರಂಭಕ್ಕೂ ಮುನ್ನಾ ದಿನವಾದ ಬುಧವಾರ ಸಂಜೆ ಶಬರಿಮಲೆ ಅಯ್ಯಪ್ಪ ದೇವಾಲಯ ಬಾಗಿಲು ತೆರೆಯಲಾಗಯಿತು. – ಪಿಟಿಐ ಚಿತ್ರ
ವಾರ್ಷಿಕ ಮಂಡಲಂ– ಮಕರವಿಲಕ್ಕು ಆರಂಭಕ್ಕೂ ಮುನ್ನಾ ದಿನವಾದ ಬುಧವಾರ ಸಂಜೆ ಶಬರಿಮಲೆ ಅಯ್ಯಪ್ಪ ದೇವಾಲಯ ಬಾಗಿಲು ತೆರೆಯಲಾಗಯಿತು. – ಪಿಟಿಐ ಚಿತ್ರ   

ಪಥನಂತಿಟ್ಟ (ಕೇರಳ) (ಪಿಟಿಐ): ವಾರ್ಷಿಕ ಮಂಡಲಂ– ಮಕರವಿಲಕ್ಕು ಆರಂಭಕ್ಕೂ ಮುನ್ನಾ ದಿನವಾದ ಬುಧವಾರ ಸಂಜೆ ಶಬರಿಮಲೆ ಅಯ್ಯಪ್ಪ ದೇವಾಲಯದ ಬಾಗಿಲು ತೆರೆಯಲಾಗಿದ್ದು, ಈ ವರ್ಷ ಭಕ್ತರ ಸಂಖ್ಯೆಯಲ್ಲಿ ಶೇ 40–50ರಷ್ಟು ಹೆಚ್ಚಾಗುವ ನಿರೀಕ್ಷೆ ಇದೆ.

ಕೋವಿಡ್‌ ಮಾರ್ಗಸೂಚಿ ಪ್ರಕಾರ ಕಳೆದ 2 ವರ್ಷ ಅಯ್ಯಪ್ಪನ ದರ್ಶನ ಪಡೆಯಲು ಭಕ್ತರ ಸಂಖ್ಯೆಯನ್ನು ಸೀಮಿತಗೊಳಿಸಲಾಗಿತ್ತು. ಆದರೆ ಈ ವರ್ಷ ನಿರ್ಬಂಧ ಇಲ್ಲ.

41 ದಿನಗಳ ವಾರ್ಷಿಕ ಮಂಡಲ ಪೂಜೆ ಗರುವಾರ ಆರಂಭವಾಗಲಿದ್ದು, ಡಿ.27ರಂದು ಮುಕ್ತಾಯಗೊಳ್ಳಲಿದೆ. ಇಲ್ಲಿಯವರೆಗೆ ವರ್ಚುವಲ್‌ ಮೂಲಕ 50,000 ಜನರು ನೋಂದಣಿ ಮಾಡಿಸಿದ್ದಾರೆ. ಅಲ್ಲದೇ ಸ್ಪಾಟ್ ಬುಕ್ಕಿಂಗ್ ಕೂಡ ಇರಲಿದೆ. ಬುಧವಾರ ಸಂಜೆ 30,000 ಭಕ್ತರು ಸ್ವಾಮಿಯ ದರ್ಶನ ಪಡೆದಿದ್ದಾರೆ ಎಂದುಕೇರಳದ ದೇವಸ್ವಂ ಸಚಿವ ಕೆ ರಾಧಾಕೃಷ್ಣನ್ ತಿಳಿಸಿದ್ದಾರೆ.

ADVERTISEMENT

ಎಲ್ಲ ಇಲಾಖೆಗಳಿಂದಲೂ ಭಕ್ತರಿಗೆ ಸಹಕಾರ: ದೇವಾಲಯದಲ್ಲಿ ದಕ್ಷಿಣ ಭಾಗದ ಎಲ್ಲ ಭಾಷೆಗಳಲ್ಲಿ ಮಾಹಿತಿ ಪ್ರದರ್ಶಿಸಲು ನಿರ್ಧಾರ ಮಾಡಲಾಗಿದೆ. ಯಾತ್ರಾರ್ಥಿಗಳಿಗೆ ತಂಗಲು ಸೂಕ್ತ ವ್ಯವಸ್ಥೆ ಮಾಡಲಾಗಿದೆ. ಪೊಲೀಸ್, ಆರೋಗ್ಯ ಹಾಗೂ ಸಾರಿಗೆ ಇಲಾಖೆಗಳು ತಮ್ಮ ಸಹಕಾರ ನೀಡಿವೆ. ವೈಮಾನಿಕ ಕಣ್ಗಾವಲು, ಗುಪ್ತಚರ ಅಧಿಕಾರಿಗಳು ಮತ್ತು ಕಮಾಂಡೋಗಳು ಸೇರಿದಂತೆ 13,000ಕ್ಕೂ ಹೆಚ್ಚು ಪೊಲೀಸರ ನಿಯೋಜನೆ ಮತ್ತು ಸಿಸಿಟಿವಿ ಕ್ಯಾಮೆರಾಗಳ ವ್ಯವಸ್ಥೆಯನ್ನು ಕೇರಳ ಪೊಲೀಸರು ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.