ನಾಗಪುರ: ಶಬರಿಮಲೆ ತೀರ್ಪಿನ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಆಚರಣೆ ಮತ್ತು ಸಂಪ್ರದಾಯವನ್ನು ಪರಿಗಣಿಸಿಲ್ಲ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಗುರುವಾರ ಅಭಿಪ್ರಾಯಪಟ್ಟಿದ್ದಾರೆ.
ಕೇವಲ ಹಿಂದೂ ಸಮಾಜದ ನಂಬಿಕೆ ಮತ್ತು ಸಂಪ್ರದಾಯಗಳು ಮಾತ್ರ ಯಾಕೆ ಪದೇ ಪದೇ ಈ ರೀತಿ ಆಗುತ್ತಿದೆ ಎಂಬಂತಹ ಪ್ರಶ್ನೆಗಳು ಜನರ ಮನಸ್ಸಿಗೆ ಬರುತ್ತವೆ,ಇಂತಹ ಬೆಳವಣಿಗೆಗಳು ಶಾಂತಿ ಮತ್ತುಆರೋಗ್ಯಯುತಸಮಾಜಕ್ಕೆ ಅನುಕೂಲಕರವಲ್ಲ ಎಂದು ಅವರು ಹೇಳಿದರು.
ಇಲ್ಲಿನ ಆರ್‌ಎಸ್‌ಎಸ್ ಪ್ರಧಾನ ಕಚೇರಿಯಲ್ಲಿವಾರ್ಷಿಕ ವಿಜಯದಶಮಿ ಆಚರಣೆ ಸಮಾವೇಶದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಆಚರಣೆಯ ಎಲ್ಲಾ ಅಂಶಗಳನ್ನು ಹಾಗೂ ನಾಗರಿಕರ ಮನಸ್ಥಿತಿಯನ್ನು ಪರಿಗಣಿಸದೇ ನಿರ್ಣಯ ತೆಗೆದುಕೊಳ್ಳುವುದನ್ನು ಯಾರೂ ಒಪ್ಪಿಕೊಳ್ಳುವುದಿಲ್ಲ. ಮತ್ತು ಇದರಿಂದ ಹೊಸ ಸಾಮಾಜಿಕ ಕ್ರಮ ಸೃಷ್ಟಿಯಾಗುವುದಿಲ್ಲ ಎಂದು ಅವರು ಹೇಳಿದರು.
ಶಬರಿಮಲೆ ತೀರ್ಪು ಸಹ ಇದೇ ಸಂಕಷ್ಟ ಸ್ಥಿತಿಯನ್ನು ತೋರಿಸುತ್ತಿದೆ. ಹಲವಾರು ವರ್ಷಗಳಿಂದ ನಡೆಯುತ್ತಿರುವ ಕೋಟ್ಯಂತರ ಜನರ ನಂಬಿಕೆ ಮತ್ತು ಆಚರಣೆಯನ್ನು ನ್ಯಾಯಾಲಯ ಪರಿಗಣಿಸಿಲ್ಲ, ಅಲ್ಲದೇಅಸಂಖ್ಯಾತ ಮಹಿಳೆಯರ ಮನವಿಯನ್ನು ಕೂಡ ಸುಪ್ರೀಂ ಕೋರ್ಟ್ ಗಣನೆಗೆ ತೆಗೆದುಕೊಂಡಿಲ್ಲ ಎಂದರು.
ಇದರ ಪರಿಣಾಮ ಸಮಾಜದಲ್ಲಿ ಸ್ಥಿರತೆ, ಶಾಂತಿ ಉಂಟಾಗುವ ಬದಲು ಪ್ರಕ್ಷುಬ್ಧತೆ ಸೃಷ್ಟಿಯಾಗುತ್ತಿದೆ ಎಂದು ಮೋಹನ್ ಭಾಗವತ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.