ADVERTISEMENT

ಮಹಾರಾಷ್ಟ್ರ: ವಜಾಗೊಂಡಿರುವ ಮಾಜಿ IAS ಪೂಜಾ ಖೇಡ್ಕರ್ ತಂದೆ ಚುನಾವಣೆಗೆ ಸ್ಪರ್ಧೆ

ಪೂಜಾ ಅವರು ಯುಪಿಎಸ್‌ಸಿಗೆ ವಂಚಿಸಿದ್ದಾರೆ ಎಂದು ಯುಪಿಎಸ್‌ಸಿ ಪೂಜಾ ವಿರುದ್ಧ ಪ್ರಕರಣ ದಾಖಲಿಸಿದೆ. ಸದ್ಯ ಪೂಜಾ ಅವರು ಬಂಧನದ ಭೀತಿಯಲ್ಲಿದ್ದಾರೆ.

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2024, 9:34 IST
Last Updated 28 ಅಕ್ಟೋಬರ್ 2024, 9:34 IST
<div class="paragraphs"><p>ಪೂಜಾ ಖೇಡ್ಕರ್,&nbsp;ದಿಲೀಪ್ ಖೇಡ್ಕರ್</p></div>

ಪೂಜಾ ಖೇಡ್ಕರ್, ದಿಲೀಪ್ ಖೇಡ್ಕರ್

   

ಬೆಂಗಳೂರು: ವಿವಾದಿತ ಮಾಜಿ ಐಎಎಸ್ ಟ್ರೈನಿ ಅಧಿಕಾರಿ ಪೂಜಾ ಖೇಡ್ಕರ್ ಅವರ ತಂದೆ ದಿಲೀಪ್ ಖೇಡ್ಕರ್ ಅವರು ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ.

ದಿಲೀಪ್ ಖೇಡ್ಕರ್ ಅವರು ಮಹಾರಾಷ್ಟ್ರದ ಅಹ್ಮದ್‌ನಗರ ಜಿಲ್ಲೆಯ ಶೇವಗಾಂವ್‌ ವಿಧಾನಸಭಾ ಕ್ಷೇತ್ರಕ್ಕೆ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ.

ADVERTISEMENT

ರಾಜಕೀಯದಲ್ಲಿ ಗುರುತಿಸಿಕೊಂಡಿರುವ ಅವರು ಕಳೆದ ಲೋಕಸಭಾ ಚುನಾವಣೆಯಲ್ಲಿ ಪ್ರಕಾಶ್ ಅಂಬೇಡ್ಕರ್ ಅವರ ವಿಬಿಎ ಪಕ್ಷದಿಂದ ಅಹ್ಮದ್‌ನಗರ ಕ್ಷೇತ್ರಕ್ಕೆ ಸ್ಪರ್ಧಿಸಿದ್ದರು. ಆ ಚುನಾವಣೆಯಲ್ಲಿ 13 ಸಾವಿರಕ್ಕೂ ಹೆಚ್ಚು ಮತಗಳನ್ನು ಪಡೆದು ಗಮನ ಸೆಳೆದಿದ್ದರು.

ದಿಲೀಪ್ ವಿಧಾನಸಭೆ ಚುನಾವಣೆಗೆ ಸಲ್ಲಿಸಿರುವ ಅಫಿಡಿವಿಟ್ ಕೂಡ ಚರ್ಚೆಗೆ ಗ್ರಾಸವಾಗಿದೆ. ದಿಲೀಪ್ ಅವರು ತಮ್ಮ ಪತ್ನಿ ಮನೋರಮಾ ಖೇಡ್ಕರ್ ಅವರಿಗೆ ವಿಚ್ಚೇದನ ನೀಡಿದ್ದಾರೆ ಎಂದು ಅಫಿಡಿವಿಟ್‌ನಲ್ಲಿ ತಿಳಿಸಿದ್ದಾರೆ.

ದಿಲೀಪ್ – ಮನೋರಮಾ ಖೇಡ್ಕರ್ ಪುತ್ರಿಯಾಗಿರುವ ಪೂಜಾ ಖೇಡ್ಕರ್ ಅವರು ಒಬಿಸಿ ಹಾಗೂ ಅಂಗವಿಕಲ ಕೋಟಾ ದುರುಪಯೋಗ ಮಾಡಿಕೊಂಡಿದ್ದಾರೆ ಎಂಬ ಆರೋಪದ ಮೇಲೆ ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ) ಅವರನ್ನು ಕೆಲಸದಿಂದ ವಜಾ ಮಾಡಿ ಸೆಪ್ಟೆಂಬರ್ 7 ರಂದು ಆದೇಶ ಮಾಡಿತ್ತು.

ಅಲ್ಲದೇ ಪೂಜಾ ಅವರು ಯುಪಿಎಸ್‌ಸಿಗೆ ವಂಚಿಸಿದ್ದಾರೆ ಎಂದು ಯುಪಿಎಸ್‌ಸಿ ಪೂಜಾ ವಿರುದ್ಧ ಪ್ರಕರಣ ದಾಖಲಿಸಿದೆ. ಸದ್ಯ ಪೂಜಾ ಅವರು ಬಂಧನದ ಭೀತಿಯಲ್ಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.