ನವದೆಹಲಿ: ಬಿಜೆಪಿ ನಾಯಕರಿಗೆ ಕೆಡುಕುಂಟು ಮಾಡಲು ವಿಪಕ್ಷಗಳುಮಾರಕ ಶಕ್ತಿ (ವ್ಯಕ್ತಿಗಳಿಗೆ ಹಾನಿಯುಂಟು ಮಾಡುವಶಕ್ತಿ) ಬಳಸುತ್ತಿದೆ ಎಂದು ಬಿಜೆಪಿ ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ಹೇಳಿದ್ದಾರೆ.
ಮಾಜಿ ವಿತ್ತ ಸಚಿವ ಅರುಣ್ ಜೇಟ್ಲಿ ಮತ್ತು ಮಧ್ಯ ಪ್ರದೇಶದ ಮಾಜಿ ಸಚಿವ ಬಾಬುಲಾಲ್ ಗೌರ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲು ರಾಜ್ಯ ಬಿಜೆಪಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಪ್ರಜ್ಞಾ ಹೇಳಿದ್ದಾರೆ.
ಇದೀಗ ನಿಮ್ಮಸಮಯ ಸರಿ ಇಲ್ಲ. ಬಿಜೆಪಿಯಲ್ಲಿರುವ ಪ್ರಾಮಾಣಿಕ ಮತ್ತು ದಕ್ಷ ಸದಸ್ಯರಿಗೆ ಕೆಡುಕಂಟು ಮಾಡುವುದಕ್ಕಾಗಿ ವಿಪಕ್ಷಮಾರಕ ಶಕ್ತಿಯನ್ನು ಬಳಸುತ್ತಿದೆಎಂದು ಸಾಧುವೊಬ್ಬರು ನನ್ನಲ್ಲಿ ಹೇಳಿದ್ದಾರೆ. ನಿಮ್ಮ ಮೇಲೆ ಗುರಿಯಿಟ್ಟಿದ್ದಾರೆ. ಜಾಗರೂಕರಾಗಿರಿ ಎಂದು ಅವರು ನನ್ನಲ್ಲಿ ಹೇಳಿದ್ದರು. ನನಗೀಗ ಅವರ ಮಾತುಗಳು ಸರಿಯಾಗಿನೆನಪಿಗೆ ಬರುತ್ತಿಲ್ಲ.ನಾನು ಆ ಬಗ್ಗೆ ಚಿಂತೆ ಮಾಡಿಕೊಂಡಿಲ್ಲ. ಆದರೆ ನಮ್ಮ ಹಿರಿಯ ನಾಯಕರಾದ ಸುಷ್ಮಾ ಜೀ, ಬಾಬುಲಾಲ್ ಜೀ ಮತ್ತು ಇತ್ತೀಚೆಗೆ ತೀರಿಕೊಂಡ ಅರುಣ್ ಜೇಟ್ಲಿಇದನ್ನೆಲ್ಲ ನೋಡಿದರೆ ಅವರು ಹೇಳಿದ್ದು ಸರಿ ಎಂದು ನನಗನಿಸುತ್ತಿದೆ ಎಂದು ಪ್ರಜ್ಞಾ ಹೇಳಿರುವುದಾಗಿ ಎಎನ್‌ಐ ಸುದ್ದಿಸಂಸ್ಥೆ ವರದಿ ಮಾಡಿದೆ.
ಮಾರಕ ಶಕ್ತಿಯು ಒಂದು ಶಕ್ತಿಯಾಗಿದ್ದು ಅದು ವ್ಯಕ್ತಿ ಅಥವಾ ತಂಡವೊಂದರ ಮೇಲೆ ಕೆಡುಕುಂಟು ಮಾಡುವುದಕ್ಕಾಗಿ ಮಾಡಿದ ಕ್ರಿಯೆ ಆಗಿರುತ್ತದೆ. ಮಾಜಿ ಕೇಂದ್ರ ಸಚಿವ ಅರುಣ್ ಜೇಟ್ಲಿ ಅವರು ಆಗಸ್ಟ್ 24 ಮತ್ತು ಸುಷ್ಮಾ ಸ್ವರಾಜ್ ಅವರು ಆಗಸ್ಟ್ 6ರಂದು ನಿಧನರಾಗಿದ್ದರು.
ನಮ್ಮ ಹಿರಿಯ ನಾಯಕರಾದ ಸುಷ್ಮಾ ಜೀ, ಬಾಬುಲಾಲ್ ಜೀ ಮತ್ತು ಜೇಟ್ಲಿ ಜೀ ಹೀಗೆ ಒಬ್ಬರ ಹಿಂದೆ ಒಬ್ಬರು ಅಗಲಿದರು. ಈ ನೋವಿನ ಸಂದರ್ಭದಲ್ಲಿ ಮಹಾರಾಜ್ ಅವರು ಹೇಳಿದ್ದು ಸರಿಯಲ್ಲವೇ ಎಂದು ನಾನು ಯೋಚಿಸುವಂತಾಗಿದೆ . ನಮ್ಮ ನಾಯಕರು ನಮ್ಮನ್ನು ಬಿಟ್ಟು ಅಗಲುತ್ತಿದ್ದಾರೆಎಂದು ಭೋಪಾಲ್ ಬಿಜೆಪಿ ಸಂಸದೆ ಹೇಳಿದ್ದಾರೆ.
ಪ್ರಜ್ಞಾ ಅವರ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್, ಅರುಣ್ ಜೇಟ್ಲಿ, ಸುಷ್ಮಾ ಸ್ವರಾಜ್, ಮನೋಹರ್ ಪರೀಕ್ಕರ್ ಮತ್ತು ಬಾಬುಲಾಲ್ ಗೌರ್ ಅವರ ನಿಧನದ ಬಗ್ಗೆ ತಮಾಷೆ ಮಾಡುತ್ತಿರುವ ಸಂಸದೆಯನ್ನು ಪಕ್ಷದಿಂದ ಉಚ್ಛಾಟಿಸಿ ಎಂದಿದೆ.
ಮಹಾರಾಷ್ಟ್ರದ ಮಾಜಿ ಎಟಿಎಸ್ ಮುಖ್ಯಸ್ಥ ಹೇಮಂತ್ ಕರ್ಕರೆ ಸಾವಿಗೀಡಾಗಿದ್ದು ನನ್ನ ಶಾಪದಿಂದ ಅಂತ ಪ್ರಜ್ಞಾ ಒಮ್ಮೊಮ್ಮೆ ಹೇಳುತ್ತಾರೆ. ಮತ್ತೊಮ್ಮೆ ಮಹಾತ್ಮಾ ಗಾಂಧಿ ಹಂತಕನಾಥೂರಾಮ್ ಗೋಡ್ಸೆ ಅವರನ್ನು ದೇಶಭಕ್ತ ಎಂದು ಹೊಗಳುತ್ತಾರೆ ಎಂದು ಮಧ್ಯಪ್ರದೇಶದ ಮುಖ್ಯಮಂತ್ರಿ ಕಮಲ್ ನಾಥ್ ಅವರ ಮಾಧ್ಯಮ ನಿರ್ದೇಶಕ ನರೇಂದ್ರ ಸಲೂಜ ಪ್ರತಿಕ್ರಿಯಿಸಿದ್ದಾರೆ.
ಜೇಟ್ಲಿ ಮತ್ತು ಗೌರ್ ಅವರ ಸಾವಿನ ದುಃಖದ ಸಂದರ್ಭದಲ್ಲಿ ಈ ರೀತಿ ಅಸಂಬದ್ಧ ಹೇಳಿಕೆ ನೀಡುವ ಪ್ರಜ್ಞಾರನ್ನು ತಕ್ಷಣವೇ ಬಿಜೆಪಿಉಚ್ಛಾಟನೆ ಮಾಡಲಿ. ಈ ಹೇಳಿಕೆ ನೀಡಿದ ಪ್ರಜ್ಞಾ ನಿಧನರಾದ ಹಿರಿಯ ನಾಯಕರ ಕುಟುಂಬದ ಕ್ಷಮೆ ಕೇಳಲಿ ಎಂದು ಸಲೂಜ ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.