ಪುಣೆ: ಭಕ್ತರು ಪ್ರಾರ್ಥನೆ ಸಲ್ಲಿಸಲು ಪವಿತ್ರ ಸ್ಥಳಕ್ಕೆ ಬಂದಾಗ 'ಸುಸಂಸ್ಕೃತ' ರೀತಿಯಲ್ಲಿ ಅಥವಾ 'ಭಾರತೀಯ ಸಂಸ್ಕೃತಿಯ' ಪ್ರಕಾರ ಉಡುಪು ಧರಿಸುವಂತೆ ಬೋರ್ಡ್ ಹಾಕಿ ಮಹಾರಾಷ್ಟ್ರದ ಶಿರಡಿಯಲ್ಲಿರುವ ಸಾಯಿಬಾಬಾ ದೇವಾಲಯದ ಟ್ರಸ್ಟ್ ಮನವಿ ಮಾಡಿದೆ.
ಸಾಯಿಬಾಬಾ ಸಂಸ್ಥಾನ ಟ್ರಸ್ಟ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕನ್ಹುರಾಜ್ ಬಾಗಟೆ ಅವರನ್ನು ಸಂಪರ್ಕಿಸಿದಾಗ, ಇದು ಕೇವಲ ಮನವಿಯಾಗಿದೆ ಮತ್ತು ಟ್ರಸ್ಟ್ ಭಕ್ತರ ಮೇಲೆ ಯಾವುದೇ ವಸ್ತ್ರ ಸಂಹಿತೆಯನ್ನು ಹೇರಿಲ್ಲ ಎಂದು ಮಂಗಳವಾರ ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ಅಹ್ಮದನಗರ ಜಿಲ್ಲೆಯ ಶಿರಡಿಯಲ್ಲಿರುವ ದೇಗುಲಕ್ಕೆ ಕೆಲವರು ಆಕ್ಷೇಪಾರ್ಹ ಉಡುಪಿನಲ್ಲಿ ಬರುತ್ತಾರೆ ಎಂದು ಭಕ್ತರು ದೂರಿದ ನಂತರ ಈ ಮನವಿ ಮಾಡಲಾಗಿದೆ ಎಂದು ಅವರು ಹೇಳಿದರು.
ಇದು ಪವಿತ್ರ ಸ್ಥಳವಾಗಿರುವುದರಿಂದ, ಸುಸಂಸ್ಕೃತ ಉಡುಪನ್ನು ಧರಿಸಿ, ಅಥವಾ ಭಾರತೀಯ ಸಂಸ್ಕೃತಿಯ ಪ್ರಕಾರ ಭಕ್ತರು ದೇಗುಲಕ್ಕೆ ಬರಬೇಕೆಂದು ನಾವು ಮನವಿ ಮಾಡಿದ್ದೇವೆ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.