ADVERTISEMENT

ಸಮಾಜವಾದಿ ಪಕ್ಷದ ನಾಯಕ ರಾಮಮೂರ್ತಿ ಸಿಂಗ್‌ ವರ್ಮಾ ನಿಧನ

ಪಿಟಿಐ
Published 23 ಏಪ್ರಿಲ್ 2021, 10:12 IST
Last Updated 23 ಏಪ್ರಿಲ್ 2021, 10:12 IST
ರಾಮಮೂರ್ತಿ ಸಿಂಗ್‌ ವರ್ಮಾ                      –ಟ್ವಿಟರ್‌ ಚಿತ್ರ
ರಾಮಮೂರ್ತಿ ಸಿಂಗ್‌ ವರ್ಮಾ                      –ಟ್ವಿಟರ್‌ ಚಿತ್ರ   

ಶಹಜಹಾನ್‌ಪುರ: ಉತ್ತರ ಪ್ರದೇಶದ ಮಾಜಿ ಸಚಿವ ಮತ್ತು ಸಮಾಜವಾದಿ ಪಕ್ಷದ ನಾಯಕ ರಾಮಮೂರ್ತಿ ಸಿಂಗ್‌ ವರ್ಮಾ (71) ದೀರ್ಘಕಾಲದ ಅನಾರೋಗ್ಯದಿಂದಾಗಿ ಶುಕ್ರವಾರ ನಿಧನರಾದರು.

‘ರಾಮಮೂರ್ತಿ ಅವರನ್ನು ಬುಧವಾರ ಬರೇಲಿಯಾ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಅವರಿಗೆ ಡಯಾಲಿಸಿಸ್ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಶುಕ್ರವಾರ ಬೆಳಿಗ್ಗೆ 2.30ಕ್ಕೆ ಅವರು ಆಸ್ಪತ್ರೆಯಲ್ಲಿ ಕೊನೆ ಉಸಿರೆಳೆದರು’ ಎಂದು ಪಕ್ಷದ ಜಿಲ್ಲಾಧ್ಯಕ್ಷ ತನ್ವೀರ್‌ ಖಾನ್‌ ತಿಳಿಸಿದರು.

ವರ್ಮಾ ಅವರು ಜಲಾಲಾಬಾದ್‌ ಕ್ಷೇತ್ರದಿಂದ ಮೂರು ಬಾರಿ ಹಾಗೂ ದಾದ್ರೌಲ್‌ನಿಂದ ಒಂದು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. ಅವರು ಶಹಜಹಾನ್‌ಪುರವನ್ನು ಕೂಡ ಲೋಕಸಭೆಯಲ್ಲಿ ಪ್ರತಿನಿಧಿಸಿದ್ದರು.

ADVERTISEMENT

ಬಿಜೆಪಿ ಶಾಸಕ ನಿಧನ:ಉತ್ತರ ಪ್ರದೇಶದ ಬಿಜೆಪಿ ಶಾಸಕ ರಮೇಶ್‌ ದಿವಾಕರ್‌ ಅವರು ಗುರುವಾರ ರಾತ್ರಿ ಕೋವಿಡ್‌ ಮೃತಪಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.