ADVERTISEMENT

ಮೋದಿ ಪ್ರಮಾಣವಚನ: ಮರಳು ಕಲಾಕೃತಿ ರಚಿಸಿ ಶುಭಕೋರಿದ ಕಲಾವಿದ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 9 ಜೂನ್ 2024, 7:53 IST
Last Updated 9 ಜೂನ್ 2024, 7:53 IST
<div class="paragraphs"><p>ನರೇಂದ್ರ ಮೋದಿ ಅವರ ಮರಳು ಶಿಲ್ಪವನ್ನು ರಚಿಸಿದ ಕಲಾವಿದ</p></div>

ನರೇಂದ್ರ ಮೋದಿ ಅವರ ಮರಳು ಶಿಲ್ಪವನ್ನು ರಚಿಸಿದ ಕಲಾವಿದ

   

(ಪಿಟಿಐ ಚಿತ್ರ)

ಪುರಿ: ಇಂದು ಸಂಜೆ 7:15ಕ್ಕೆ ಪ್ರಧಾನಿಯಾಗಿ ನರೇಂದ್ರ ಮೋದಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ADVERTISEMENT

ಪ್ರಮಾಣ ವಚನ ಸಮಾರಂಭಕ್ಕೂ ಮುನ್ನ ಖ್ಯಾತ ಮರಳು ಕಲಾವಿದ ಸುದರ್ಶನ್ ಪಟ್ನಾಯಕ್ ಅವರು ಒಡಿಶಾದ ಪುರಿಯ ಸಮುದ್ರ ತೀರದಲ್ಲಿ ನಿಯೋಜಿತ ಪ್ರಧಾನಿ ನರೇಂದ್ರ ಮೋದಿ ಅವರ ಮರಳು ಶಿಲ್ಪವನ್ನು ರಚಿಸಿ ಶುಭಕೋರಿದ್ದಾರೆ.

ಈ ಬಗ್ಗೆ ಎನ್‌ಡಿಟಿವಿ ವರದಿ ಮಾಡಿದೆ.

ಪುರಿ ಕಡಲ ಕಿನಾರೆಯಲ್ಲಿ ಮೋದಿಯವರ ಕಲಾಕೃತಿಯನ್ನು ರಚಿಸಲಾಗಿದೆ. ಕಲಾಕೃತಿಯ ಮೇಲೆ 'ಅಭಿನಂದನ್ ಮೋದಿ ಜಿ 3.0' ಹಾಗೂ 'ವಿಕಸಿತ ಭಾರತ' ಎಂದು ಬರೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.