ADVERTISEMENT

ವಾಯುಪಡೆಯ ಪೈಲಟ್‌ ಆಗಿ ಸಾನಿಯಾ ಆಯ್ಕೆ: ಮೊದಲ ಮುಸ್ಲಿಂ ವನಿತೆ ಎನ್ನುವ ಕೀರ್ತಿ

ಟಿವಿ ಮೆಕ್ಯಾನಿಕ್‌ನ ಪುತ್ರಿಯ ಅಭೂತಪೂರ್ವ ಸಾಧನೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 23 ಡಿಸೆಂಬರ್ 2022, 5:25 IST
Last Updated 23 ಡಿಸೆಂಬರ್ 2022, 5:25 IST
ಸಾನಿಯಾ ಮಿರ್ಜಾ (ಟ್ವಿಟರ್‌ ಚಿತ್ರ)
ಸಾನಿಯಾ ಮಿರ್ಜಾ (ಟ್ವಿಟರ್‌ ಚಿತ್ರ)   

ಮಿರ್ಜಾ‍ಪುರ: ಉತ್ತರ ಪ್ರದೇಶದ ಸಾನಿಯಾ ಮಿರ್ಜಾ ಎನ್ನುವ ಯುವತಿ, ಭಾರತೀಯ ವಾಯುಸೇನೆಯ ಫೈಟರ್‌ ಪೈಲಟ್ ಆಗಿ ಆಯ್ಕೆಯಾಗಿದ್ದಾರೆ. ಆ ಮೂಲಕ ಭಾರತೀಯ ವಾಯುಸೇನೆಯಲ್ಲಿ ಪೈಲಟ್‌ ಆಗಿ ಆಯ್ಕೆಯಾದ ಮೊದಲ ಮುಸ್ಲಿಂ ಮಹಿಳೆ ಎನ್ನುವ ಕೀರ್ತಿಗೆ ಪಾತ್ರರಾಗಿದ್ದಾರೆ.

ಮಿರ್ಜಾಪುರದ ಜಸೋವರ್‌ ನಿವಾಸಿಯಾಗಿರುವ ಸಾನಿಯಾ ಮಿರ್ಜಾ ಅವರ ತಂದೆ ಟಿವಿ ಮೆಕ್ಯಾನಿಕ್‌ ಆಗಿದ್ದಾರೆ. ಬಡತನದಲ್ಲಿ ಬೆಳೆದ ಯುವತಿಯೊಬ್ಬಳು ಇದೀಗ ಈ ಸಾಧನೆ ಮಾಡಿದ್ದು, ಊರಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ.

ಹಿಂದಿ ಮಾಧ್ಯಮದಲ್ಲಿ ವಿದ್ಯಾಭ್ಯಾಸ ಮಾಡಿರುವ ಸಾನಿಯಾ, ರಾಷ್ಟ್ರೀಯ ರಕ್ಷಣಾ ಅಕಾಡೆಮಿ (ಎನ್‌ಡಿಎ) ನಡೆಸುವ ಪರೀಕ್ಷೆಯಲ್ಲಿ ತೇರ್ಗಡೆಯಾಗಿ, ಇದೀಗ ವಾಯುಪಡೆಯ ಪೈಲಟ್‌ ತರಬೇತಿಗೆ ಆಯ್ಕೆಯಾಗಿದ್ದಾರೆ. ಪುಣೆಯ ಎನ್‌ಡಿಎ ಖಡಕ್‌ವಾಸ್ಲಾಕ್ಕೆ ಅವರು ಡಿ.27 ಕ್ಕೆ ದಾಖಲಾಗಲಿದ್ದಾರೆ. ಅಲ್ಲಿ ಅವರಿಗೆ ಪೈಲಟ್‌ ತರಬೇತಿ ನಡೆಯಲಿದೆ.

ADVERTISEMENT

‘ನನ್ನ ಈ ಸಾಧನೆಯನ್ನು ತಂದೆ ತಾಯಿಗೆ ಅರ್ಪಣೆ ಮಾಡುತ್ತೇನೆ. 2022ರಎನ್‌ಡಿಎ ಪರೀಕ್ಷೆಯಲ್ಲಿ, ಫೈಟರ್ ಪೈಲಟ್‌ ವಿಭಾಗದಲ್ಲಿ ಮಹಿಳೆಯರಿಗೆ ಕೇವಲ 2 ಸ್ಥಾನ ಮಾತ್ರ ಇತ್ತು. ಎರಡನೇ ಪ್ರಯತ್ನದಲ್ಲಿ ನಾನು ತೇರ್ಗಡೆಯಾದೆ‘ ಎಂದು ಸಾನಿಯಾ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.