ADVERTISEMENT

ವೀರಪ್ಪನ್‌ಗೆ ದುಸ್ವಪ್ನವಾಗಿದ್ದ ಸಂಜಯ್ ಅರೋರಾ ದೆಹಲಿ ಪೊಲೀಸ್ ಕಮಿಷನರ್ ಆಗಿ ನೇಮಕ

ವೀರಪ್ಪನ್ ವಿರುದ್ಧದ ಕಾರ್ಯಾಚರಣೆಯಲ್ಲಿ ಮುಂಚೂಣಿಯಲ್ಲಿದ್ದರು

ಪಿಟಿಐ
Published 31 ಜುಲೈ 2022, 9:44 IST
Last Updated 31 ಜುಲೈ 2022, 9:44 IST
 ಸಂಜಯ್ ಅರೋರಾ
ಸಂಜಯ್ ಅರೋರಾ    

ನವದೆಹಲಿ: ತಮಿಳುನಾಡು ಕೇಡರ್‌ನ ಹಿರಿಯ ಐಪಿಎಸ್‌ ಅಧಿಕಾರಿ ಸಂಜಯ್ ಅರೋರಾ ಅವರನ್ನು ದೆಹಲಿ ಪೊಲೀಸ್ ಆಯುಕ್ತರನ್ನಾಗಿ ನಿಯೋಜಿಸಿ ಕೇಂದ್ರ ಗೃಹ ಇಲಾಖೆ ಭಾನುವಾರ ಆದೇಶಿಸಿದೆ.

ಸಂಜಯ್ ಅರೋರಾ ಅವರು ಆಗಸ್ಟ್ 1 ರಂದು ಸೋಮವಾರ ದೆಹಲಿಯಲ್ಲಿ ಅಧಿಕಾರ ಸ್ವೀಕರಿಸಲಿದ್ದಾರೆ.

ಪ್ರಸ್ತುತ ಐಟಿಬಿಪಿ ಪಡೆಯ ಮಹಾ ನಿರ್ದೇಶಕರಾಗಿರುವ ಸಂಜಯ್ ಅರೋರಾ ಅವರು ದೆಹಲಿ ಪೊಲೀಸ್ ಕಮಿಷನರ್ ಆಗಿದ್ದ ರಾಕೇಶ್ ಆಸ್ತಾನಾ ಅವರ ಸ್ಥಾನ ತುಂಬಲಿದ್ದಾರೆ.ರಾಕೇಶ್ 2021 ಆಗಸ್ಟ್‌ನಲ್ಲಿ ದೆಹಲಿ ಪೊಲೀಸ್ ಕಮಿಷನರ್ ಆಗಿ ನಿಯುಕ್ತಿಗೊಂಡಿದ್ದರು. ಇಂದು ನಿವೃತ್ತಿಯಾದರು.

ADVERTISEMENT

1988 ರ ಬ್ಯಾಚ್‌ನ ತಮಿಳುನಾಡು ಕೇಡರ್ ಐಪಿಎಸ್ ಅಧಿಕಾರಿಯಾಗಿದ್ದ ಸಂಜಯ್ ಅರೋರಾತಮಿಳುನಾಡಿನ ಅನೇಕ ಜಿಲ್ಲೆಗಳಲ್ಲಿ ಎಸ್‌ಪಿಯಾಗಿ ಕಾರ್ಯನಿರ್ವಹಿಸಿದ್ದರು. ಅರೋರಾ ಅವರು ಕಾಡುಗಳ್ಳ ವೀರಪ್ಪನ್ ವಿರುದ್ಧದ ಕಾರ್ಯಾಚರಣೆಯಲ್ಲಿ ಮುಂಚೂಣಿಯಲ್ಲಿದ್ದರು. ಇದಕ್ಕಾಗಿ ಅವರಿಗೆ ‘ಮುಖ್ಯಮಂತ್ರಿ ಶೌರ್ಯ ಪದಕ’ ಲಭಿಸಿತ್ತು.

ಸದ್ಯ ಎಸ್‌ಎಸ್‌ಬಿ ಡಿಜಿ ಆಗಿರುವ ಎಸ್‌.ಎಲ್ ತಾವೋಸೇನ್ ಅವರು ಐಟಿಬಿಪಿಯ ಉಸ್ತುವಾರಿ ಡಿಜಿ ಆಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಗೃಹ ಇಲಾಖೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.