ಮುಂಬೈ: ಶಿವಸೇನಾದ ವಕ್ತಾರ ಮತ್ತು ಸಂಸದ ಸಂಜಯ ರಾವುತ್ ಅವರನ್ನು ಜಾರಿ ನಿರ್ದೇಶನಾಲ
ಯದ (ಇ.ಡಿ.) ಅಧಿಕಾರಿಗಳು ಭಾನುವಾರ ತಮ್ಮ ಕಚೇರಿಗೆ ಕರೆದೊಯ್ದಿದ್ದಾರೆ. ಅದಕ್ಕೂ ಮೊದಲು, ರಾವುತ್ ಅವರ ಭಾಂಡುಪ್‌ನಲ್ಲಿರುವ ನಿವಾಸದಲ್ಲಿ ಸುಮಾರು ಒಂಬತ್ತು ತಾಸು ಶೋಧ ನಡೆಸಲಾಗಿದೆ. ರಾವುತ್ ಅವರನ್ನು ಮನೆಯಲ್ಲಿಯೂ ತನಿಖೆಗೆ ಒಳಪಡಿಸಲಾಗಿತ್ತು.
‘ನಕಲಿ ಸಾಕ್ಷ್ಯಗಳ ಆಧಾರ’ದಲ್ಲಿ ತಮ್ಮ ವಿರುದ್ಧ ಹುಸಿ ಪ್ರಕರಣ ದಾಖಲಿಸಲಾಗಿದೆ. ಅದಕ್ಕೆ ತಲೆಬಾಗುವ ಮತ್ತು ಪಕ್ಷವನ್ನು ತೊರೆಯುವ ಪ್ರಶ್ನೆಯೇ ಇಲ್ಲ ಎಂದು ಇ.ಡಿ. ಅಧಿಕಾರಿಗಳು ಕಚೇರಿಗೆ ಕರೆದೊಯ್ಯುವ ಮುನ್ನ ರಾವುತ್ ಹೇಳಿದ್ದರು. ‘ಅವರು ನನ್ನನ್ನು ಬಂಧಿಸುತ್ತಾರೆ, ನನ್ನನ್ನು ಜೈಲಿಗೆ ಕಳುಹಿಸುತ್ತಾರೆ’ ಎಂದು ಇ.ಡಿ. ಕಚೇರಿಯಲ್ಲಿ ಹೇಳಿದರು.
ಇ.ಡಿ. ಅಧಿಕಾರಿಗಳು ಭಾರಿ ಸಂಖ್ಯೆಯ ಪೊಲೀಸರೊಂದಿಗೆ ಬೆಳಿಗ್ಗೆ ಏಳು ಗಂಟೆಗೆ ರಾವುತ್ ಮನೆಗೆ ಬಂದಿದ್ದರು. ತನಿಖೆಗೆ ಹಾಜರಾಗುವಂತೆ ರಾವುತ್ ಅವರಿಗೆ ಎರಡು ನೋಟಿಸ್ ನೀಡಲಾಗಿತ್ತು. ಎರಡು ಬಾರಿಯೂ ವಿವಿಧ ಕಾರಣಗಳಿಂದಾಗಿ ರಾವುತ್ ಅವರು ತನಿಖೆಗೆ ಹಾಜರಾಗಿರಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.