ADVERTISEMENT

ಗೆಲುವು ಶಂಕಾಸ್ಪದ, ದೊಡ್ಡ ಪಿತೂರಿ: ಸಂಸದ ಸಂಜಯ್‌ ರಾವುತ್‌

ಪಿಟಿಐ
Published 23 ನವೆಂಬರ್ 2024, 21:53 IST
Last Updated 23 ನವೆಂಬರ್ 2024, 21:53 IST
<div class="paragraphs"><p>ಸಂಜಯ್‌ ರಾವುತ್‌</p></div>

ಸಂಜಯ್‌ ರಾವುತ್‌

   

– ಪಿಟಿಐ ಚಿತ್ರ

ಮುಂಬೈ: ‘ಮಹಾರಾಷ್ಟ್ರದಲ್ಲಿ ಮಹಾಯುತಿ ಗೆಲುವಿನ ಹಿಂದೆ ‘ದೊಡ್ಡ ಪಿತೂರಿ’ಯಿದ್ದು, ಗೆಲುವು ಶಂಕಾಸ್ಪದವಾಗಿದೆ’ ಎಂದು ಶಿವಸೇನಾ (ಯುಬಿಟಿ) ಪಕ್ಷದ ನಾಯಕ, ರಾಜ್ಯಸಭಾ ಸಂಸದ ಸಂಜಯ್‌ ರಾವುತ್‌ ಅನುಮಾನ ವ್ಯಕ್ತಪಡಿಸಿದ್ದಾರೆ.

ADVERTISEMENT

ಪತ್ರಕರ್ತರ ಜೊತೆ ಮಾತನಾಡಿದ ಅವರು, ‘ಈಗಿನ ಪರಿಸ್ಥಿತಿಗೆ ಅನುಗುಣವಾಗಿ ಜನರ ತೀರ್ಪು ಫಲಿತಾಂಶದಲ್ಲಿ ವ್ಯಕ್ತವಾಗಿಲ್ಲ. ತಳಮಟ್ಟದಲ್ಲಿ ಹಾಲಿ ಸರ್ಕಾರದ ವಿರುದ್ಧ ಜನರು ಆಕ್ರೋಶ ಹೊಂದಿದ್ದಾರೆ. ಇದರ ಹಿಂದೆ ದೊಡ್ಡ ಪಿತೂರಿ ನಡೆದಿರುವ ಅನುಮಾನವಿದೆ. ಇದು ಮರಾಠಿ ‘ಮನೂಸ್‌’ ಅಥವಾ ರೈತರು ನೀಡಿದ ತೀರ್ಪಲ್ಲ. ಇದು ಜನರು ನೀಡಿದ ತೀರ್ಪು ಎಂಬುದನ್ನು ನಾವು ಒಪ್ಪುವುದಿಲ್ಲ, ಗೆಲುವು ಶಂಕಾಸ್ಪಂದವಾಗಿದೆ’ ಎಂದು ತಿಳಿಸಿದರು.

‘ಈ ಚುನಾವಣೆಯಲ್ಲಿ ಹಣದ ಬಳಕೆ ವ್ಯಾಪಕವಾಗಿದೆ. ಮುಖ್ಯಮಂತ್ರಿ ಏಕನಾಥ್‌ ಶಿಂದೆ ನೇತೃತ್ವ ಪಕ್ಷದ ಎಲ್ಲ ಶಾಸಕರು ಗೆಲ್ಲಲು ಹೇಗೆ ಸಾಧ್ಯ? ದ್ರೋಹವೆಸಗಿದ ಅಜಿತ್‌ ಪವಾರ್‌ ಹೇಗೆ ಗೆಲುವು ಪಡೆಯಲು ಸಾಧ್ಯ’ ಎಂದು ಪ್ರಶ್ನಿಸಿದರು.

ಕಾಂಗ್ರೆಸ್ ಮುಖಂಡ ಉದಿತ್‌ ರಾಜ್ ಅವರೂ ವಿದ್ಯುನ್ಮಾನ ಮತಯಂತ್ರಗಳನ್ನು (ಇವಿಎಂ) ಬಳಸಿಕೊಂಡು ಫಲಿತಾಂಶವನ್ನು ಮಹಾಯುತಿ ತಕ್ಕಂತೆ ಬದಲಿಸಿರುವ ಸಾಧ್ಯತೆ ಇದೆ ಎಂದು
ಅಭಿಪ್ರಾಯಪಟ್ಟಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.