ADVERTISEMENT

ಫ್ರಾನ್ಸ್‌ಗೆ ಭಾರತದ ರಾಯಭಾರಿಯಾಗಿ ಸಂಜೀವ್ ಕುಮಾರ್ ಸಿಂಗ್ಲಾ ನೇಮಕ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 7 ಅಕ್ಟೋಬರ್ 2024, 6:46 IST
Last Updated 7 ಅಕ್ಟೋಬರ್ 2024, 6:46 IST
   

ನವದೆಹಲಿ: 1997ರ ಬ್ಯಾಚ್‌ನ ಐಎಫ್ಎಸ್‌ ಅಧಿಕಾರಿ ಸಂಜೀವ್ ಕುಮಾರ್ ಸಿಂಗ್ಲಾ ಅವರನ್ನು ಫ್ರಾನ್ಸ್‌ಗೆ ಭಾರತದ ರಾಯಭಾರಿಯನ್ನಾಗಿ ನೇಮಕ ಮಾಡಲಾಗಿದೆ.

ಈ ಸಂಬಂಧ ವಿದೇಶಾಂಗ ವ್ಯವಹಾರಗಳ ಇಲಾಖೆ ಪ್ರಕಟಿಸಿದೆ.

ಸಂಜೀವ್ ಕುಮಾರ್ ಅವರು ಸದ್ಯ ಇಸ್ರೇಲ್‌ಗೆ ಭಾರತದ ರಾಯಭಾರಿಯಾಗಿ ಕರ್ತವ್ಯದಲ್ಲಿದ್ದಾರೆ. ಶೀಘ್ರದಲ್ಲೇ ಹೊಸ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ ಎಂದು ತಿಳಿಸಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.