ADVERTISEMENT

ಜೆಎನ್‌ಯು ಮೊದಲ ಮಹಿಳಾ ಕುಲಪತಿಯಾಗಿ ಸಾಂತಿಶ್ರೀ ಪಂಡಿತ್

ಪಿಟಿಐ
Published 7 ಫೆಬ್ರುವರಿ 2022, 10:03 IST
Last Updated 7 ಫೆಬ್ರುವರಿ 2022, 10:03 IST
ಸಾಂತಿಶ್ರೀ ಧೂಲಿಪುಡಿ ಪಂಡಿತ್
ಸಾಂತಿಶ್ರೀ ಧೂಲಿಪುಡಿ ಪಂಡಿತ್   

ನವದೆಹಲಿ: ಜವಾಹರ್‌ಲಾಲ್ ನೆಹರೂ ವಿಶ್ವವಿದ್ಯಾಲಯದ (ಜೆಎನ್‌ಯು) ಮೊದಲ ಮಹಿಳಾ ಕುಲಪತಿಯಾಗಿ ಸಾಂತಿಶ್ರೀ ಧೂಲಿಪುಡಿ ಪಂಡಿತ್ ಅವರನ್ನು ಶಿಕ್ಷಣ ಸಚಿವಾಲಯ ಸೋಮವಾರ ನೇಮಕ ಮಾಡಿದೆ.

ಪಂಡಿತ್ ಅವರು ಪ್ರಸ್ತುತ ಮಹಾರಾಷ್ಟ್ರದ ಸಾವಿತ್ರಿಬಾಯಿ ಫುಲೆ ಯೂನಿವರ್ಸಿಟಿಯಲ್ಲಿ ಕುಲಪತಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಅವರು ಜೆಎನ್‌ಯುವಿನಲ್ಲಿ ಎಂಎಫಿಲ್ ಮತ್ತು 'ಅಂತರರಾಷ್ಟ್ರೀಯ ಸಂಬಂಧಗಳು' ಎನ್ನುವ ವಿಚಾರದಲ್ಲಿ ಪಿಎಚ್‌ಡಿ ಪದವಿ ಪಡೆದಿದ್ದಾರೆ.

ADVERTISEMENT

ಮುಂದಿನ ಐದು ವರ್ಷಗಳ ಅವಧಿಗೆ ಸಾಂತಿಶ್ರೀ ಅವರನ್ನು ಜೆಎನ್‌ಯು ಕುಲಪತಿಯನ್ನಾಗಿ ನೇಮಕ ಮಾಡಿದ್ದು, ರಾಷ್ಟ್ರಪತಿ ರಾಮನಾಥ ಕೋವಿಂದ್ ಅದನ್ನು ಅಂಗೀಕರಿಸಿದ್ದಾರೆ ಎಂದು ಶಿಕ್ಷಣ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.