ADVERTISEMENT

ಭಾರತದ ಏಕತೆ ಸಂದೇಶ ಜಗತ್ತಿಗೆ ಸಾರಿದ ಸರ್ದಾರ್‌ ಪಟೇಲ್‌: ಅಮಿತ್‌ ಶಾ

ಪಿಟಿಐ
Published 31 ಅಕ್ಟೋಬರ್ 2021, 7:39 IST
Last Updated 31 ಅಕ್ಟೋಬರ್ 2021, 7:39 IST
ಸರ್ದಾರ್‌ ಪಟೇಲರ ಏಕತಾ ಮೂರ್ತಿ
ಸರ್ದಾರ್‌ ಪಟೇಲರ ಏಕತಾ ಮೂರ್ತಿ   

ಕೆವಾಡಿಯಾ, ಗುಜರಾಜ್‌: ಭಾರತದ ಏಕತೆ ಮತ್ತು ಸಮಗ್ರತೆಯನ್ನು ಯಾರೊಬ್ಬರೂ ನಾಶಪಡಿಸಲು ಸಾಧ್ಯವಿಲ್ಲ ಎಂಬ ಸಂದೇಶವನ್ನು ಸರ್ದಾರ್‌ ವಲ್ಲಭಭಾಯಿ ಪಟೇಲರು ಜಗತ್ತಿಗೆ ನೀಡಿದ್ದಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಭಾನುವಾರ ಹೇಳಿದ್ದಾರೆ.

ಪಟೇಲ್‌ ಅವರ ಜನ್ಮದಿನದ ಹಿನ್ನೆಲೆ ಗುಜರಾತ್‌ನ ಕೆವಾಡಿಯಾ ಪ್ರದೇಶದಲ್ಲಿ ನಿರ್ಮಿಸಿರುವ ಅವರ 182 ಮೀಟರ್‌ ಎತ್ತರದ ಏಕಶಿಲಾ ಪ್ರತಿಮೆ ಸ್ಥಳಕ್ಕೆ ಶಾ ಭೇಟಿ ನೀಡಿದರು.

ಇದು ಇಂದು ಯಾವುದೋ ಒಂದು ಸ್ಥಳವಾಗಿಲ್ಲ. ಇದು ರಾಷ್ಟ್ರೀಯ ಏಕತೆ ಮತ್ತು ದೇಶಭಕ್ತಿಯ ದೇಗುಲವಾಗಿದೆ ಎಂದು ಇದೇ ವೇಳೆ ಹೇಳಿದರು.

ADVERTISEMENT

ಪಟೇಲರ ಜನ್ಮದಿನವನ್ನು ರಾಷ್ಟ್ರೀಯ ಏಕತಾ ದಿನವನ್ನಾಗಿ ಆಚರಿಸಲಾಗುತ್ತದೆ.

ರಾಷ್ಟ್ರೀಯ ಏಕತಾ ದಿನದ ಹಿನ್ನೆಲೆ ವಿಡಿಯೊ ಸಂದೇಶವೊಂದನ್ನು ನೀಡಿರುವ ಪ್ರಧಾನಿ ನರೇಂದ್ರ ಮೋದಿ, ಸರ್ದಾರ್‌ ಪಟೇಲ್‌ ಅವರ ಸ್ಪೂರ್ತಿಯಿಂದ ಭಾರತವು ಇಂದು ತನ್ನನ್ನು ತಾನು ರಕ್ಷಿಸುಕೊಳ್ಳುವಲ್ಲಿ ಸ್ವಾವಲಂಬಿಯಾಗುತ್ತಿದೆ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.