₹ 2,300 ಕೋಟಿ
ಪ್ರತಿಮೆ ನಿರ್ಮಾಣದ ವೆಚ್ಚ
ಲೋಹ ಅಭಿಯಾನ
‘ಉಕ್ಕಿನ ಮನುಷ್ಯ’ನ ಪ್ರತಿಮೆ ನಿರ್ಮಾಣಕ್ಕೆ ಅಗತ್ಯವಿರುವ ಬಹುಪಾಲು ಲೋಹವನ್ನು ದೇಶದ ಎಲ್ಲಾ ಗ್ರಾಮಗಳಿಂದ ಸಂಗ್ರಹಿಸಲು ‘ಲೋಹ ಅಭಿಯಾನ’ ನಡೆಸಲಾಗಿತ್ತು. ರೈತರಿಂದ ಕೃಷಿ ಸಲಕರಣೆಗಳ ಲೋಹಗಳನ್ನು ಸಂಗ್ರಹಿಸಲಾಯಿತು. ಹೀಗೆ ಒಟ್ಟು 1.69 ಲಕ್ಷ ಲೋಹದ ತುಣುಕುಗಳನ್ನು ಸಂಗ್ರಹಿಸಿ, ಅದನ್ನು ಪ್ರತಿಮೆ ನಿರ್ಮಾಣದಲ್ಲಿ ಬಳಸಲಾಗಿದೆ
* ಪಟೇಲರ ಜೀವನಗಾಥೆ ಸಾರುವ ವಸ್ತುಸಂಗ್ರಹಾಲಯ
* ‘ಲೇಸರ್ ಲೈಟ್’ ಪ್ರದರ್ಶನ
* ಸರ್ದಾರ್ ಪಟೇಲ್, ಮಹಾತ್ಮಾ ಗಾಂಧಿ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ಅವರ ಜೀವನ–ಸಾಧನೆಗಳ ಬಗ್ಗೆ ಅಧ್ಯಯನ ನಡೆಸಲು ಸಂಶೋಧನಾ ಕೇಂದ್ರ
* ಪ್ರತಿಮೆ ಸುತ್ತಲಿನ ಪ್ರದೇಶದಲ್ಲಿ ಜಲವಿಹಾರ
* ದೇಶದ ಎಲ್ಲಾ ರಾಜ್ಯಗಳ ಹೆಗ್ಗಳಿಕೆ ಮತ್ತು ಮಹತ್ವವನ್ನು ಸಾರುವ ಪ್ರದರ್ಶನ ಕೇಂದ್ರ
* ಪ್ರತಿಮೆಯ ಉದ್ದಕ್ಕೂ ಮೇಲಕ್ಕೇರುವ–ಇಳಿಯುವ ಲಿಫ್ಟ್ ವ್ಯವಸ್ಥೆ. ಪ್ರತಿಮೆ ಸುತ್ತಮುತ್ತಲಿನ ಪ್ರದೇಶ ಮತ್ತು ನರ್ಮದಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಸರ್ದಾರ್ ಸರೋವರ ಅಣೆಕಟ್ಟಿನ ವಿಹಂಗಮ ನೋಟ ಲಭ್ಯ
ಬೇರೆಲ್ಲಾ ಪ್ರತಿಮೆಗಳಿನ್ನು ಕುಬ್ಜ–ಕುಬ್ಜ
182 ಮೀಟರ್ಏಕತಾ ಪ್ರತಿಮೆ
153 ಮೀಟರ್ ಸ್ಪ್ರಿಂಗ್ ಟೆಂಪಲ್ ಬುದ್ಧ, ಚೀನಾ
120 ಮೀಟರ್ ಉಶಿಕು ದಯಬುತ್ಸು, ಜಪಾನ್
93 ಮೀಟರ್ ಸ್ಟಾಚ್ಯು ಆಫ್ ಲಿಬರ್ಟಿ, ಅಮೆರಿಕ
85 ಮೀಟರ್ ಮದರ್‌ಲ್ಯಾಂಡ್ ಕಾಲ್ಸ್, ರಷ್ಯಾ
38 ಮೀಟರ್ ಕ್ರೈಸ್ಟ್ ದಿ ರಿಡೀಮರ್, ಬ್ರೆಜಿಲ್
ಆಧಾರ: ಪಿಟಿಐ,www.statueofunity.in
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.