ADVERTISEMENT

‌AAP ನಾಯಕ ಸತ್ಯೇಂದ್ರ ಜೈನ್‌ ಜಾಮೀನು ಅರ್ಜಿ ವಜಾ: ತಕ್ಷಣವೇ ಶರಣಾಗಲು SC ಆದೇಶ

ಪಿಟಿಐ
Published 18 ಮಾರ್ಚ್ 2024, 6:30 IST
Last Updated 18 ಮಾರ್ಚ್ 2024, 6:30 IST
<div class="paragraphs"><p>ಸತ್ಯೇಂದ್ರ ಜೈನ್‌ </p></div>

ಸತ್ಯೇಂದ್ರ ಜೈನ್‌

   

ನವದೆಹಲಿ; ಭ್ರಷ್ಟಾಚಾರ ಪ್ರಕರಣ ಎದುರಿಸುತ್ತಿರುವ ಎಎಪಿ ನಾಯಕ ಸತ್ಯೇಂದ್ರ ಜೈನ್‌ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿರುವ ಸುಪ್ರೀಂ ಕೋರ್ಟ್‌ ತಕ್ಷಣವೇ ಶರಣಾಗುವಂತೆ ಆದೇಶಿಸಿದೆ.

ನ್ಯಾಯಮೂರ್ತಿಗಳಾದ ಬೇಲಾ ಎಂ.ತ್ರಿವೇದಿ ಹಾಗೂ ಪಂಕಜ್‌ ಮಿತ್ತಲ್‌ ಅವರಿದ್ದ ಪೀಠವು, ಮಧ್ಯಂತರ ಜಾಮೀನಿನ ಮೇಲೆ ಹೊರಗಿರುವ ಜೈನ್ ಅವರ ಜಾಮಿನು ಅರ್ಜಿಯನ್ನು ಸೋಮವಾರ ವಿಚಾರಣೆ ನಡೆಸಿತು. ಈ ವೇಳೆ ಒಂದು ವಾರದ ಅವಧಿಯಲ್ಲಿ ಶರಣಾಗಲು ಅವಕಾಶ ನೀಡುವಂತೆ ಜೈನ್ ಅವರ ವಕೀಲರ ಮೌಖಿಕ ಕೋರಿಕೆಯನ್ನು ಕೂಡ ನ್ಯಾಯಪೀಠ ತಿರಸ್ಕರಿಸಿದೆ.

ADVERTISEMENT

ಜನವರಿ 17 ರಂದು, ಸುಪ್ರೀಂ ಕೋರ್ಟ್ ಅವರ ಜಾಮೀನು ಅರ್ಜಿಯ ತೀರ್ಪನ್ನು ಕಾಯ್ದಿರಿಸಿತ್ತು.

2023ರ ಮೇ 26 ರಂದು ವೈದ್ಯಕೀಯ ಕಾರಣಗಳಿಗಾಗಿ ಉನ್ನತ ನ್ಯಾಯಾಲಯವು ಜೈನ್‌ಗೆ ಮಧ್ಯಂತರ ಜಾಮೀನು ನೀಡಿತ್ತು, ಅಲ್ಲದೆ ಅದನ್ನು ಕಾಲಕಾಲಕ್ಕೆ ವಿಸ್ತರಿಸಲಾಗಿತ್ತು.

ನಾಲ್ಕು ಕಂಪನಿಗಳ ಮೂಲಕ ಅಕ್ರಮವಾಗಿ ಹಣವನ್ನು ವರ್ಗಾವಣೆ ಮಾಡಿದ ಅರೋಪದ ಮೇಲೆ 2022 ರ ಮೇ 30 ರಂದು ಜೈನ್‌ ಅವರನ್ನು ಇಡಿ ಬಂಧಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.