ADVERTISEMENT

‘ತಲಾಖ್‌–ಎ– ಹಸನ್’ ವಿರುದ್ಧದ ಅರ್ಜಿ ವಿಚಾರಣೆ ಆರಂಭಿಸಿದ ಸುಪ್ರೀಂ ಕೋರ್ಟ್

ಪಿಟಿಐ
Published 11 ಅಕ್ಟೋಬರ್ 2022, 14:22 IST
Last Updated 11 ಅಕ್ಟೋಬರ್ 2022, 14:22 IST
ಪ್ರಾತಿನಿಧಿಕ ಚಿತ್ರ 
ಪ್ರಾತಿನಿಧಿಕ ಚಿತ್ರ    

ನವದೆಹಲಿ:‘ತಲಾಕ್-ಎ-ಹಸನ್‌’ ಸೇರಿದಂತೆ ಮುಸ್ಲಿಂ ಸಮುದಾಯದಲ್ಲಿರುವ ಎಲ್ಲಾ ರೀತಿಯ ಏಕಪಕ್ಷೀಯ ಮತ್ತು ಕಾನೂನುಬಾಹಿರ ವಿಚ್ಛೇದನವನ್ನು ಅಸಿಂಧು ಮತ್ತು ಅಸಾಂವಿಧಾನಿಕ ಎಂದು ಘೋಷಿಸಲು ಕೋರಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆಯನ್ನು ಮಂಗಳವಾರದಿಂದ ಸುಪ್ರೀಂ ಕೋರ್ಟ್ ಕೈಗೆತ್ತಿಕೊಂಡಿದೆ.

ನ್ಯಾಯಮೂರ್ತಿಗಳಾದ ಎಸ್.ಕೆ.ಕೌಲ್ ನೇತೃತ್ವದತ್ರಿಸದಸ್ಯ ಪೀಠವು, ಅರ್ಜಿಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ, ರಾಷ್ಟ್ರೀಯ ಮಹಿಳಾ ಆಯೋಗ, ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಮತ್ತು ಇತರರಿಗೆ ನಾಲ್ಕು ವಾರಗಳಲ್ಲಿ ತಮ್ಮ ಪ್ರತಿಕ್ರಿಯೆಗಳನ್ನು ಸಲ್ಲಿಸುವಂತೆ ಸೂಚಿಸಿದೆ.

‘ತಲಾಖ್-ಎ-ಹಸನ್‌’ನ ಬಲಿಪಶುಗಳೆಂದು ಹೇಳಿಕೊಂಡಿರುವ ಗಾಜಿಯಾಬಾದ್ ನಿವಾಸಿ ಬೆನಜೀರ್ ಹೀನಾ ಎಂಬುವವರು ಸಲ್ಲಿಸಿದ ಅರ್ಜಿ ಸೇರಿದಂತೆ ಮೂರು ಪ್ರತ್ಯೇಕ ಅರ್ಜಿಗಳನ್ನು ಸುಪ್ರೀಂಕೋರ್ಟ್ ವಿಚಾರಣೆ ನಡೆಸುತ್ತಿದೆ.

ADVERTISEMENT

ಮಂಗಳವಾರ ವಿಚಾರಣೆ ಆರಂಭವಾದಾಗ ಬೆನಜೀರ್ ಅವರ ಪತಿ ಪರ ವಾದ ಮಂಡಿಸಿದ ವಕೀಲರು, ‘ಅರ್ಜಿದಾರರು ತಮ್ಮ ಪತ್ನಿ ಜತೆಗಿನ ವಿವಾದ ಇತ್ಯರ್ಥಕ್ಕೆ ಸಮ್ಮತಿಯನ್ನು ಹೊಂದಿಲ್ಲ’ ಎಂದು ನ್ಯಾಯಾಲಯಕ್ಕೆ ತಿಳಿಸಿದರು.

ನಂತರ ನ್ಯಾಯಮೂರ್ತಿಗಳಾದ ಅಭಯ್ ಎಸ್. ಓಕಾ ಮತ್ತು ವಿಕ್ರಮ್‌ನಾಥ್ ಅವರನ್ನೊಳಗೊಂಡ ತ್ರಿಸದಸ್ಯ ಪೀಠವು,ಕಕ್ಷಿದಾರರಿಗೆ ತಮ್ಮ ಪ್ರತಿಕ್ರಿಯೆಗಳನ್ನು ಸಲ್ಲಿಸುವಂತೆ ಕೇಳಿತು ಮತ್ತು 2023ರ ಜನವರಿ ಮೂರನೇ ವಾರದಲ್ಲಿ ಪ್ರಕರಣದ ವಿಚಾರಣೆ ನಡೆಸುವುದಾಗಿ ಹೇಳಿತು.

‘ತಲಾಖ್‌–ಎ–ಹಸನ್‌’ ಎಂಬುದು ಮುಸ್ಲಿಂ ಸಮುದಾಯದಲ್ಲಿರುವ ವಿಚ್ಛೇದನದ ಒಂದು ಸ್ವರೂಪವಾಗಿದೆ. ಮೂರು ತಿಂಗಳ ಅವಧಿಯಲ್ಲಿ ಪತಿಯಾದವನು ತನ್ನ ಪತ್ನಿಗೆ ತಿಂಗಳಿಗೊಮ್ಮೆಯಂತೆ ಮೂರು ಬಾರಿ ‘ತಲಾಖ್’ ಎಂದು ಹೇಳುವ ಮೂಲಕ ಆ ಮದುವೆಯನ್ನು ವಿಸರ್ಜಿಸಬಹುದಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.