ನವದೆಹಲಿ: ಜೈಲಿನಲ್ಲಿ ದಟ್ಟಣೆ ತಪ್ಪಿಸಲು ಕೋವಿಡ್ ಸಾಂಕ್ರಾಮಿಕದ ಅವಧಿಯಲ್ಲಿ ಬಿಡುಗಡೆ ಮಾಡಿದ್ದ ಎಲ್ಲ ವಿಚಾರಣಾಧೀನ ಕೈದಿಗಳು 15 ದಿನದಲ್ಲಿ ಶರಣಾಗಬೇಕು ಎಂದು ಸುಪ್ರೀಂ ಕೋರ್ಟ್ ಆದೇಶಿಸಿದೆ.
ನ್ಯಾಯಮೂರ್ತಿಗಳಾದ ಎಂ.ಆರ್.ಶಾ, ಸಿ.ಟಿ.ರವಿಕುಮಾರ್ ಅವರಿದ್ದ ಪೀಠ, ತುರ್ತು ಜಾಮೀನಿನಡಿ ಬಿಡುಗಡೆ ಆದವರು ಶರಣಾಗತಿಯ ಬಳಿಕ ಜಾಮೀನು ಕೋರಿ ಸಕ್ಷಮ ಕೋರ್ಟ್‌ಗಳಿಗೆ ಅರ್ಜಿ ಸಲ್ಲಿಸಬಹುದು ಎಂದು ತಿಳಿಸಿತು.
ಗಂಭೀರವಲ್ಲದ ಅಪರಾಧಗಳಿಗೆ ಸಂಬಂಧಿಸಿ ಬಂಧಿಸಿದ್ದವರನ್ನು ಕೋವಿಡ್ ಸಂದರ್ಭದಲ್ಲಿ ಜೈಲಿನಲ್ಲಿ ದಟ್ಟಣೆ ತಪ್ಪಿಸಲು, ಸುಪ್ರೀಂ ಕೋರ್ಟ್ ನಿರ್ದೇಶನದಂತೆ ರಚನೆಯಾಗಿದ್ದ ಉನ್ನತಾಧಿಕಾರ ಸಮಿತಿ ಸಲಹೆ ಆಧರಿಸಿ ಬಿಡುಗಡೆ ಮಾಡಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.