ನವದೆಹಲಿ: ಹೂಡಿಕೆದಾರರಿಗೆ ₹25,700 ಕೋಟಿ ಹಿಂದಿರುಗಿಸಲು ವಿಫಲವಾಗಿರುವ ಸಹರಾ ಗ್ರೂಪ್ ಮುಖ್ಯಸ್ಥ ಸುಬ್ರತ ರಾಯ್ ಫೆಬ್ರುವರಿ 28ರೊಳಗೆ ನ್ಯಾಯಾಲಯಕ್ಕೆ ಹಾಜರಾಗುವಂತೆ ಸುಪ್ರೀಂ ಕೋರ್ಟ್ ಗುರುವಾರ ತಾಕೀತು ಮಾಡಿದೆ.
‘ಹಣ ಹಿಂದಿರುಗಿಸಲು ಆರು ತಿಂಗಳ ಕಾಲವಕಾಶ ನೀಡಲಾಗಿತ್ತು. ಆದರೆ, ₹15,000 ಕೋಟಿಯನ್ನಷ್ಟೇ ಠೇವಣಿ ಮಾಡಲಾಗಿದೆ. ಈವರೆಗೆ ವರ್ಗಾವಣೆಯಾಗಿರುವ ಹಣ ನ್ಯಾಯಾಲಯಕ್ಕೆ ಸಹರಾ ಗ್ರೂಪ್ ಬಗ್ಗೆ ವಿಶ್ವಸಾರ್ಹತೆ ಉಂಟುಮಾಡಿಲ್ಲ’ ಎಂದು ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ನೇತೃತ್ವದ ಪೀಠ ಹೇಳಿದೆ.
ಹೆಚ್ಚಿನ ಕಾಲವಕಾಶ ಅಥವಾ ಇತರೆ ನಿರ್ದೇಶನಗಳನ್ನು ನೀಡಲು ಪೀಠ ನಿರಾಕರಿಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.