ನವದೆಹಲಿ: ಮಲಯಾಳ ಚಿತ್ರ ನಟ ಸಿದ್ದೀಕ್ ಅವರಿಗೆ ಅತ್ಯಾಚಾರ ಪ್ರಕರಣವೊಂದರಲ್ಲಿ ಬಂಧನದಿಂದ ನೀಡಿರುವ ಮಧ್ಯಂತರ ರಕ್ಷಣೆಯನ್ನು ಸುಪ್ರೀಂ ಕೋರ್ಟ್ ವಿಸ್ತರಿಸಿದೆ.
ನ್ಯಾಯಮೂರ್ತಿಗಳಾದ ಬೇಲಾ ಎಂ. ತ್ರಿವೇದಿ ಮತ್ತು ಸತೀಶ್ ಚಂದ್ರ ಶರ್ಮ ಅವರು ಇದ್ದ ವಿಭಾಗೀಯ ಪೀಠವು, ತನಿಖೆಗೆ ಸಹಕಾರ ನೀಡುವಂತೆ ಸಿದ್ದೀಕ್ ಅವರಿಗೆ ಸೂಚನೆ ನೀಡಿದೆ.
ಸಿದ್ದೀಕ್ ಪರವಾಗಿ ಹಾಜರಿದ್ದ ಹಿರಿಯ ವಕೀಲ ಮುಕುಲ್ ರೋಹಟಗಿ, ‘ನಟನ ಬಳಿ 2016ರಲ್ಲಿ ಇದ್ದ ಫೋನ್ ಹಾಗೂ ಲ್ಯಾಪ್‌ಟಾಪ್ ಬಗ್ಗೆ ತನಿಖಾಧಿಕಾರಿಗಳು ಮತ್ತೆ ಮತ್ತೆ ಕೇಳುತ್ತಿದ್ದಾರೆ. ಆದರೆ ಅವೆರಡೂ ಈಗ ಇಲ್ಲ’ ಎಂದು ತಿಳಿಸಿದರು.
ಸಿದ್ದೀಕ್ ಅವರು ದೂರುದಾರ ಮಹಿಳೆಯನ್ನು ಒಂದು ಬಾರಿ ಮಾತ್ರ ಭೇಟಿ ಮಾಡಿದ್ದಾರೆ ಎಂದು ಕೂಡ ರೋಹಟಗಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.