ADVERTISEMENT

ವೈದ್ಯಕೀಯ ಆಧಾರದಲ್ಲಿ ಶಾಶ್ವತ ಜಾಮೀನು ಕೋರಿ ವರವರ ರಾವ್‌ ಅರ್ಜಿ: 19ರಂದು ವಿಚಾರಣೆ

ಪಿಟಿಐ
Published 12 ಜುಲೈ 2022, 10:38 IST
Last Updated 12 ಜುಲೈ 2022, 10:38 IST
ವರವರ ರಾವ್
ವರವರ ರಾವ್   

ನವದೆಹಲಿ :ಭೀಮಾ ಕೊರೆಗಾಂವ್‌ ಪ್ರಕರಣದ ಆರೋಪಿ, ಹೋರಾಟಗಾರ ಪಿ.ವರವರ ರಾವ್‌, ವೈದ್ಯಕೀಯ ಆಧಾರದಲ್ಲಿ ಶಾಶ್ವತ ಜಾಮೀನು ಕೋರಿದ್ದ ಅರ್ಜಿ ಜುಲೈ 19ರಂದು ವಿಚಾರಣೆಗೆ ಬರಲಿದೆ. ಅಲ್ಲದೆ ಮುಂದಿನ ಆದೇಶದವರೆಗೆ ಅವರಿಗೆ ಮಧ್ಯಂತರ ರಕ್ಷಣೆ ವಿಸ್ತರಿಸಲಾಗಿದೆ.

ಶಾಶ್ವತ ಜಾಮೀನು ಕೋರಿದ್ದ ಅರ್ಜಿಯನ್ನು ಈ ಹಿಂದೆ ಬಾಂಬೆ ಹೈಕೋರ್ಟ್ ತಿರಸ್ಕರಿಸಿತ್ತು. ಅದನ್ನು ಪ್ರಶ್ನಿಸಿ 83 ವರ್ಷದ ವರವರರಾವ್ ‘ಸುಪ್ರೀಂ’ಗೆ ಮೇಲ್ಮನವಿ ಸಲ್ಲಿಸಿದ್ದಾರೆ. ವೈದ್ಯಕೀಯ ಜಾಮೀನು ಪಡೆದಿದ್ದ ವರವರ ರಾವ್ ಅವರು ಮಂಗಳವಾರ ಶರಣಾದರು.

ವಿಚಾರಣೆಯನ್ನು ಇದೇ 19ಕ್ಕೆ ನಿಗದಿಪಡಿಸಿದ ನ್ಯಾಯಮೂರ್ತಿ ಯು.ಯು.ಲಲಿತ್‌, ಅಲ್ಲಿಯವರೆಗೂ ಅವರಿಗೆ ಮಧ್ಯಂತರ ರಕ್ಷಣೆ ಮುಂದುವರಿಯಲಿದೆ ಎಂದು ಹೇಳಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.