ADVERTISEMENT

ಕಿರುಕುಳ ಪ್ರಕರಣ: ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಶ್ರೀನಿವಾಸ್‌ಗೆ ಜಾಮೀನು

ಪಿಟಿಐ
Published 20 ಅಕ್ಟೋಬರ್ 2023, 11:26 IST
Last Updated 20 ಅಕ್ಟೋಬರ್ 2023, 11:26 IST
<div class="paragraphs"><p>ಬಿ.ವಿ. ಶ್ರೀನಿವಾಸ್</p></div>

ಬಿ.ವಿ. ಶ್ರೀನಿವಾಸ್

   

ನವದೆಹಲಿ: ಕಿರುಕುಳ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಭಾರತೀಯ ಯುವ ಕಾಂಗ್ರೆಸ್ (ಐವೈಸಿ) ಅಧ್ಯಕ್ಷ ಬಿ.ವಿ. ಶ್ರೀನಿವಾಸ್ ಅವರಿಗೆ ಸುಪ್ರೀಂ ಕೋರ್ಟ್‌ ಶುಕ್ರವಾರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.

ಶ್ರೀನಿವಾಸ್ ಅವರು ತನಿಖೆಗೆ ಸಹಕರಿಸುತ್ತಿದ್ದಾರೆ ಎಂದು ಹೇಳಿದ ತ್ರಿಸದಸ್ಯ ನ್ಯಾಯಪೀಠವು ಮೇ 17ರಂದು ತಾನು ನೀಡಿದ್ದ ಆದೇಶ ಅಬಾಧಿತ ಎಂದು ತಿಳಿಸಿತು. ನ್ಯಾಯಮೂರ್ತಿಗಳಾದ ಬಿ.ಆರ್. ಗವಾಯಿ, ಅರವಿಂದ ಕುಮಾರ್ ಮತ್ತು ಪಿ.ಕೆ. ಮಿಶ್ರಾ ಅವರು ಪೀಠದಲ್ಲಿದ್ದರು.

ADVERTISEMENT

ಸುಪ್ರೀಂ ಕೋರ್ಟ್‌ ಶ್ರೀನಿವಾಸ್ ಅವರಿಗೆ ಮೇ 17ರಂದು ಬಂಧನದಿಂದ ರಕ್ಷಣೆ ಒದಗಿಸಿತ್ತು. ಶ್ರೀನಿವಾಸ್ ವಿರುದ್ಧ ದೂರು ದಾಖಲಿಸಿದ್ದ ಮಹಿಳೆಯು, ‘ಅಶ್ಲೀಲ ಮಾತುಗಳ ಮೂಲಕ ಶ್ರೀನಿವಾಸ್ ಅವರು ಕಳೆದ ಆರು ತಿಂಗಳುಗಳಿಂದ ಕಿರುಕುಳ ನೀಡುತ್ತಿದ್ದಾರೆ’ ಎಂದು ಹೇಳಿದ್ದರು. ಪಕ್ಷದ ಹಿರಿಯ ನಾಯಕರಿಗೆ ತಮ್ಮ ವಿರುದ್ಧ ದೂರು ಸಲ್ಲಿಸುತ್ತಿದ್ದರೆ ಪರಿಣಾಮ ಕೆಟ್ಟದ್ದಾಗಿರುತ್ತದೆ ಎಂಬುದಾಗಿ ಬೆದರಿಸುತ್ತಿದ್ದರು ಎಂದೂ ದೂರಿನಲ್ಲಿ ಹೇಳಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.