ನವದೆಹಲಿ: ಶಬರಿಮಲೆಗೆ ಎಲ್ಲ ವಯಸ್ಸಿನ ಮಹಿಳೆಯರು ಪ್ರವೇಶಿಸಬಹುದು ಎಂಬ ಸುಪ್ರೀಂಕೋರ್ಟ್ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಿದ ಮೇಲ್ಮನವಿ ಮತ್ತು ರಿಟ್ ಅರ್ಜಿಗಳ ವಿಚಾರಣೆ ನವೆಂಬರ್ 13ರಂದು ನಡೆಯಲಿದೆ.ಶಬರಿಮಲೆಯಲ್ಲಿ ಮಂಡಲಕಾಲ ಪೂಜೆ ಆರಂಭವಾಗುವ ಮುನ್ನ ಈ ಅರ್ಜಿಗಳ ವಿಚಾರಣೆ ನಡೆಸುವುದಾಗಿ ಸುಪ್ರೀಂಕೋರ್ಟ್ ಹೇಳಿದೆ.ನವೆಂಬರ್ 17ಕ್ಕೆ ಮಂಡಲಕಾಲ ಪೂಜೆ ಆರಂಭವಾಗಲಿದೆ.
ಮುಂಬೈ ಮಲಯಾಳಿಗಳ ಸಂಘಟನೆಯಾದ ರಾಷ್ಟ್ರೀಯ ಅಯ್ಯಪ್ಪ ಭಕ್ತಜನ ಮಹಿಳಾ ಸಂಘ, ಜಯ ರಾಜಕುಮಾರ್ ಎಂಬವರು ರಿಟ್ ಅರ್ಜಿ ಸಲ್ಲಿಸಿದ್ದರು.
ಪ್ರವೇಶ ನಿಷೇಧಿಸಲ್ಪಟ್ಟ ಯಾವುದೇ ಮಹಿಳೆ ತಮಗೆ ದೇಗುಲಕ್ಕೆ ಪ್ರವೇಶಿಸಬೇಕೆಂದು ಒತ್ತಾಯಿಸಿ ನ್ಯಾಯಾಲಯದ ಮೊರೆ ಹೋಗಿಲ್ಲ. ಸುಪ್ರೀಂಕೋರ್ಟ್‍ನ ಈ ತೀರ್ಪು ಅಯ್ಯಪ್ಪ ಭಕ್ತರ ಹಕ್ಕುಗಳನ್ನು ಉಲ್ಲಂಘಿಸಿದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.