ADVERTISEMENT

'ಹಿಂದುತ್ವ' ಪದ 'ಭಾರತೀಯ ಸಾಂವಿಧಾನಿಕತೆ'ಎಂದು ಬದಲಿಸಲು ಕೋರಿದ್ದ ಅರ್ಜಿ ತಿರಸ್ಕೃತ

ಪಿಟಿಐ
Published 21 ಅಕ್ಟೋಬರ್ 2024, 8:06 IST
Last Updated 21 ಅಕ್ಟೋಬರ್ 2024, 8:06 IST
supreme-court-
supreme-court-   

ನವದೆಹಲಿ: 'ಹಿಂದುತ್ವ' ಎಂಬ ಪದವನ್ನು 'ಭಾರತೀಯ ಸಂವಿಧಾನಿತ್ವ' (ಭಾರತೀಯ ಸಾಂವಿಧಾನಿಕತೆ) ಎಂದು ಬದಲಿಸಲು ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ.

ಇದು ನ್ಯಾಯಾಂಗ ಪ್ರಕ್ರಿಯೆಯ ಸಂಪೂರ್ಣ ದುರುಪಯೋಗವಾಗಿದೆ ಎಂದು ಮುಖ್ಯ ನ್ಯಾಯಮೂರ್ತಿ ಡಿ. ವೈ. ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಜೆ.ಬಿ. ಪರ್ದಿವಾಲ ಹಾಗೂ ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠವು ಪಿಐಎಲ್ ಅನ್ನು ರದ್ದುಗೊಳಿಸುವ ಸಂದರ್ಭ ಹೇಳಿದೆ.

ದೆಹಲಿಯ ವಿಕಾಸಪುರಿ ನಿವಾಸಿ ಎಸ್.ಎನ್. ಕುಂದ್ರಾ ಎಂಬುವವರು ಈ ಪಿಐಎಲ್ ಸಲ್ಲಿಸಿದ್ದರು.

ADVERTISEMENT

‘ಇಲ್ಲ ಸರ್, ನಾವು ನಿಮ್ಮ ಅರ್ಜಿಯನ್ನು ಪರಿಗಣಿಸುವುದಿಲ್ಲ’ ಎಂದು ಸಿಜೆಐ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.