ADVERTISEMENT

ಐಎನ್‌ಎಸ್‌ ವಿರಾಟ್: ಯಥಾಸ್ಥಿತಿ ಕಾಪಾಡಲು ‘ಸುಪ್ರೀಂ‘ ಆದೇಶ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2021, 14:38 IST
Last Updated 10 ಫೆಬ್ರುವರಿ 2021, 14:38 IST
ಐಎನ್‌ಎಸ್‌ ವಿರಾಟ್‌
ಐಎನ್‌ಎಸ್‌ ವಿರಾಟ್‌   

ನವದೆಹಲಿ: ಭಾರತೀಯ ನೌಕಾಪಡೆಯ ಸೇವೆಯಿಂದ ನಿವೃತ್ತವಾಗಿರುವ ಐಎನ್‌ಎಸ್‌ ವಿರಾಟ್ ವಿಮಾನ ವಾಹಕಯುದ್ಧನೌಕೆಯನ್ನು ಗುಜರಿಗಾಗಿ ಒಡೆದುಹಾಕುವ ನಿರ್ಧಾರದಲ್ಲಿ ಯಥಾಸ್ಥಿತಿಯನ್ನು ಮುಂದುವರಿಸಬೇಕೆಂದು ಸುಪ್ರೀಂ ಕೋರ್ಟ್‌ ತಿಳಿಸಿದೆ.

ಎನ್ವಿಟೆಕ್ ಮರೀನ್ ಕನ್ಸಲ್ಟಂಟ್ ಪ್ರೈವೇಟ್ ಲಿಮಿಟೆಡ್‌ ಸಲ್ಲಿಸಿದ್ದ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎಸ್‌.ಎ.ಬೊಬಡೆ ನೇತೃತ್ವದ ನ್ಯಾಯಮೂರ್ತಿಗಳಾದ ಎ.ಎಸ್.ಬೋಪಣ್ಣ, ಬಾಲಸುಬ್ರಹ್ಮಣಿಯನ್ ಅವರಿದ್ದ ಪೀಠವು ವಿಚಾರಣೆ ನಡೆಸಿತು.

ಈ ಸಂಬಂಧ, ಕೇಂದ್ರ ಸರ್ಕಾರಕ್ಕೆ ನ್ಯಾಯಾಲಯ ನೋಟಿಸ್‌ ನೀಡಲಾಗಿದೆ.

ADVERTISEMENT

‘ಈ ನೌಕೆಯನ್ನು ತೇಲುವ ವಸ್ತುಸಂಗ್ರಹಾಲಯವನ್ನಾಗಿ ಮಾಡುವ ಉದ್ದೇಶದಿಂದ ₹100 ಕೋಟಿ ಬೆಲೆಗೆ ಕೇಳಿದ್ದೆವು. ಆದರೆ ನೌಕೆಯನ್ನು ಗುಜರಿಗಾಗಿ ಒಡೆದುಹಾಕಲು ₹ 38 ಕೋಟಿಗೆ ಮಾರಲಾಗಿದೆ’ ಎಂದು ಗೋವಾದ ಅರ್ಜಿಯಲ್ಲಿ ತಿಳಿಸಲಾಗಿತ್ತು.

ಭಾರತೀಯ ನೌಕಾಪಡೆಯಲ್ಲಿ ಸುದೀರ್ಘ 30 ವರ್ಷಗಳ ಕಾಲ ವಿವಿಧ ಕಾರ್ಯಾಚರಣೆಗೆ ಬಳಸಲಾಗಿದ್ದ ಐಎನ್‌ಎಸ್‌ ವಿರಾಟ್‌ ನೌಕೆಯನ್ನು 2017ರಲ್ಲಿಸೇವೆಯಿಂದ ಮುಕ್ತಗೊಳಿಸಲಾಯಿತು. ಹಡಗು ಒಡೆಯುವ ಕಟ್ಟೆಯಾಗಿರುವ ಗುಜರಾತ್‌ನ ಅಲಂಗ್‌ನಲ್ಲಿರುವ ಕಂಪನಿಗೆ ಈ ನೌಕೆಯನ್ನು ಮಾರಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.