ನವದೆಹಲಿ: ಚಂಡೀಗಢ ಮೇಯರ್ ಚುನಾವಣೆಯಲ್ಲಿ 8 ಮತಗಳ ಅನರ್ಹತೆಯಿಂದ ಪರಾಭವಗೊಂಡಿದ್ದ ಎಎಪಿಯ ಕುಲದೀಪ್ ಕುಮಾರ್ ಅವರನ್ನು ಮೇಯರ್ ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಘೋಷಿಸಿದೆ. ಜತೆಗೆ ಚುನಾವಣೆಯಲ್ಲಿ ದುಷ್ಕೃತ್ಯ ಎಸಗಿದ ಚುನಾವಣಾಧಿಕಾರಿ ವಿರುದ್ಧ ಕ್ರಮ ಕೈಗೊಳ್ಳುವಂತೆಯೂ ಆದೇಶಿಸಿದೆ.
ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್, ನ್ಯಾ. ಜೆ.ಬಿ.ಪರದಿವಾಲಾ ಹಾಗೂ ನ್ಯಾ. ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠವು ಎಎಪಿ ಅಭ್ಯರ್ಥಿ ಕುಲದೀಪ್ ಕುಮಾರ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದರು.
ಚುನಾವಣಾ ಪ್ರಕ್ರಿಯೆಯಲ್ಲಿ ಚುನಾವಣಾಧಿಕಾರಿ ಅನಿಲ್ ಮಾಸಿ ಅವರೇ ಅಕ್ರಮ ಎಸಗಿದ್ದಾರೆ ಎಂದು ಮನೋಜ್ ಆರೋಪಿಸಿದ್ದರು.
ಜ. 30ರಂದು ನಡೆದಿದ್ದ ಚಂಡೀಗಢ ಪಾಲಿಕೆಯ ಮೇಯರ್ ಚುನಾವಣೆಯಲ್ಲಿ ಬಿಜೆಪಿ ಜಯಸಾಧಿಸಿತ್ತು. ಇದರಲ್ಲಿ 8 ಮತಗಳು ಅನರ್ಹಗೊಂಡಿದ್ದವು. ಇದರಲ್ಲಿ ಎಎಪಿ–ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಕುಲದೀಪ್ ಕುಮಾರ್ ಪರಾಭವಗೊಂಡಿದ್ದ ಬೆನ್ನಲ್ಲೇ, ಮತಪತ್ರಗಳನ್ನು ಅಕ್ರಮವಾಗಿ ವಿರೂಪಗೊಳಿಸಿ ಅಸಿಂಧುಗೊಳಿಸಲಾಗಿದೆ ಎಂದು ಅರ್ಜಿಯಲ್ಲಿ ದೂರಲಾಗಿತ್ತು.
24 ಮತಗಳಲ್ಲಿ 8 ಮತಗಳು ಅನರ್ಹಗೊಂಡಿದ್ದವು. 16 ಮತಗಳಲ್ಲಿ ಮನೋಜನ್ ಸೋನಕರ್ ಅವರು 12 ಮತಗಳನ್ನು ಪಡೆಯುವ ಮೂಲಕ ಜಯ ಸಾಧಿಸಿದ್ದರು.
‘ಮೇಯರ್ ಚುನಾವಣೆಯ ಚುನಾವಣಾಧಿಕಾರಿ ಅನಿಲ್ ಮಾಸಿ ಅವರು ಉದ್ದೇಶಪೂರ್ವಕವಾಗಿ 8 ಮತಗಳನ್ನು ವಿರೂಪಗೊಳಿಸುವ ಮೂಲಕ ಅನರ್ಹಗೊಳಿಸಿದ್ದಾರೆ’ ಎಂದು ಅಭಿಪ್ರಾಯಪಟ್ಟಿರುವ ಸುಪ್ರೀಂ ಕೋರ್ಟ್ ಅವರ ವಿರುದ್ಧ ತನಿಖೆ ನಡೆಸಿ, ಕ್ರಮ ಕೈಗೊಳ್ಳುವಂತೆ ಆದೇಶಿಸಿದೆ.
ಮೇಯರ್ ಚುನಾವಣೆಗೆ ಸ್ಪರ್ಧಿಸಿದ್ದ ಕುಲದೀಪ್ ಅವರಿಗೆ ಎಎಪಿ ಮತ್ತು ಕಾಂಗ್ರೆಸ್ ಬೆಂಬಲ ಘೋಷಿಸಿದ್ದವು. 24 ಮತಗಳಲ್ಲಿ 8 ಮತಗಳು ಅನರ್ಹಗೊಂಡವು ಎಂದು ಘೋಷಿಸಿದ ಚುನಾವಣಾಧಿಕಾರಿ, 16 ಮತಗಳನ್ನು ಎಣಿಕೆಗೆ ಪುರಸ್ಕರಿಸಿದರು. ಇದರಲ್ಲಿ 12 ಮತಗಳನ್ನು ಪಡೆದ ಬಿಜೆಪಿಯ ಮನೋಜ್ ಸೋನಕರ್ ಗೆಲುವು ಸಾಧಿಸಿದ್ದಾರೆ ಎಂದು ಘೋಷಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.