ADVERTISEMENT

ಗುರ್ಮೀತ್‌ ರಾಮ್‌ ರಹೀಮ್‌ ಸಿಂಗ್‌ ವಿಚಾರಣೆಗೆ ಸುಪ್ರೀಂ ಕೋರ್ಟ್‌ ಅಸ್ತು

ಗುರುಗ್ರಂಥ ಸಾಹಿಬ್‌ ಧರ್ಮಗ್ರಂಥಕ್ಕೆ ಅಪಚಾರ ಪ‍್ರಕರಣ

ಪಿಟಿಐ
Published 18 ಅಕ್ಟೋಬರ್ 2024, 16:02 IST
Last Updated 18 ಅಕ್ಟೋಬರ್ 2024, 16:02 IST
ಗುರ್ಮೀತ್‌ ರಾಮ್‌ ರಹೀಮ್‌ ಸಿಂಗ್‌
ಗುರ್ಮೀತ್‌ ರಾಮ್‌ ರಹೀಮ್‌ ಸಿಂಗ್‌   

ನವದೆಹಲಿ: ಡೇರಾ ಸಚ್ಚಾ ಸೌದಾ ಪಂಥದ ಮುಖ್ಯಸ್ಥ, ಅತ್ಯಾಚಾರ ಅಪರಾಧಿ ಗುರ್ಮೀತ್‌ ರಾಮ್‌ ರಹೀಮ್‌ ಸಿಂಗ್‌ ವಿರುದ್ಧ 2015ರಲ್ಲಿ ಪಂಜಾಬ್‌ನಲ್ಲಿ ದಾಖಲಾಗಿರುವ ಧರ್ಮಗ್ರಂಥಕ್ಕೆ ಅಪಚಾರ ಮಾಡಿದ ಪ್ರಕರಣದ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್‌ ಶುಕ್ರವಾರ ಅನುಮತಿ ನೀಡಿದೆ.

ಪಂಜಾಬ್‌ ಹಾಗೂ ಹರಿಯಾಣ ಹೈಕೋರ್ಟ್ ನೀಡಿದ ತಡೆಯಾಜ್ಞೆಯನ್ನು ತೆರವುಗೊಳಿಸಿದ ನ್ಯಾಯಮೂರ್ತಿಗಳಾದ ಬಿ.ಆರ್‌.ಗವಾಯಿ ಹಾಗೂ ಕೆ.ವಿ.ವಿಶ್ವನಾಥನ್‌ ನೇತೃತ್ವದ ನ್ಯಾಯಪೀಠವು ಈ ಕುರಿತು ಅಭಿಪ‍್ರಾಯ ದಾಖಲಿಸುವಂತೆ ಗುರ್ಮೀತ್‌ ರಾಮ್‌ ರಹೀಮ್‌ ಸಿಂಗ್‌ಗೆ ಸೂಚನೆ ನೀಡಿದೆ. 

ಪ್ರಕರಣಕ್ಕೆ ತಡೆಯಾಜ್ಞೆ ನೀಡಿದ್ದನ್ನು ಪಂಜಾಬ್‌ ಸರ್ಕಾರವು ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಿತ್ತು. 

ADVERTISEMENT

2015ರಲ್ಲಿ ಜೂನ್‌ನಿಂದ ಅಕ್ಟೋಬರ್‌ ತಿಂಗಳಲ್ಲಿ ಗುರ್ಮೀತ್‌ ರಾಮ್‌ ರಹೀಮ್‌ ಸಿಂಗ್‌ ಹಾಗೂ ಬೆಂಬಲಿಗರು ಸಿಖ್‌ ಸಮುದಾಯದ ಪವಿತ್ರ ಧರ್ಮಗ್ರಂಥ ‘ಗುರುಗ್ರಂಥ ಸಾಹಿಬ್‌’ಗೆ ಅಪಚಾರವೆಸಗಿದ್ದರು. ಈ ಕುರಿತು ಫರಿದಾಕೋಟ್‌ನ ಬಜಾಖಾನಾ ಠಾಣೆಯಲ್ಲಿ ಮೂರು ಪ್ರಕರಣಗಳು ದಾಖಲಾಗಿದ್ದವು.

ಈ ಬೆಳವಣಿಗೆ ಬಳಿಕ ರಾಜ್ಯದಾದ್ಯಂತ ಭಾರೀ ಪ್ರತಿಭಟನೆಗಳು ನಡೆದಿದ್ದವು. ಬಳಿಕ ಈ ಪ್ರಕರಣಗಳನ್ನು ಸಿಬಿಐಗೆ ವಹಿಸಲಾಗಿತ್ತು.

2023ರಲ್ಲಿ ಗುರ್ಮೀತ್‌ ರಾಮ್‌ ರಹೀಮ್‌ ಸಿಂಗ್‌, ಬೆಂಬಲಿಗರ ಮೇಲಿನ ಪ್ರಕರಣಗಳನ್ನು ಸುಪ್ರೀಂಕೋರ್ಟ್ ಫರಿದಾಕೋಟ್‌ನಿಂದ ಚಂಡೀಗಢಕ್ಕೆ ವರ್ಗಾಯಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.