ADVERTISEMENT

ಸುಪ್ರೀಂಕೋರ್ಟ್‌ ಕಲಾಪದ ನೇರ ಪ್ರಸಾರದಲ್ಲಿ ಲಿಪ್ಯಂತರಕ್ಕೆ ಚಾಲನೆ

ಪ್ರಾಯೋಗಿಕವಾಗಿ ಚಾಲನೆ ನೀಡಿದ ಸುಪ್ರೀಂಕೋರ್ಟ್‌

ಪಿಟಿಐ
Published 21 ಫೆಬ್ರುವರಿ 2023, 10:45 IST
Last Updated 21 ಫೆಬ್ರುವರಿ 2023, 10:45 IST
ಸುಪ್ರೀಂಕೋರ್ಟ್
ಸುಪ್ರೀಂಕೋರ್ಟ್   

ನವದೆಹಲಿ: ಸುಪ್ರೀಂಕೋರ್ಟ್‌ನಲ್ಲಿ ನಡೆಯುವ ಕಲಾಪಗಳನ್ನು ನೇರ ಪ್ರಸಾರದಲ್ಲಿ ಲಿಪ್ಯಂತರ ಮಾಡುವ ಕಾರ್ಯಕ್ಕೆ ಪ್ರಾಯೋಗಿಕವಾಗಿ ಮಂಗಳವಾರ ಚಾಲನೆ ನೀಡಲಾಯಿತು.

ಈ ಕಾರ್ಯಕ್ಕೆ ಕೃತಕ ಬುದ್ಧಿಮತ್ತೆ (ಎಐ) ಹಾಗೂ ‘ನೈಸರ್ಗಿಕ ಭಾಷಾ ಸಂಸ್ಕರಣಾ ತಂತ್ರಜ್ಞಾನ’ (ಎನ್‌ಎಲ್‌ಪಿಟಿ) ವನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಸುಪ್ರೀಂಕೋರ್ಟ್‌ ಮೂಲಗಳು ಹೇಳಿವೆ.

ಮುಖ್ಯನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ನೇತೃತ್ವದ ಸಾಂವಿಧಾನಿಕ ಪೀಠವು ನಡೆಸಿದ ಪ್ರಕರಣವೊಂದರ ವಿಚಾರಣೆಯನ್ನು ಈ ತಂತ್ರಜ್ಞಾನಗಳನ್ನು ಬಳಸಿ, ಲಿಪ್ಯಂತರ ಮಾಡಲಾಯಿತು. ಲಿಪ್ಯಂತರ ಮಾಡಲಾದ ಮಾಹಿತಿಯನ್ನು ವಕೀಲರಿಗೆ ನೀಡಲಾಗುತ್ತದೆ. ಅವರು ಪರಿಶೀಲನೆ ನಡೆಸಿದ ಬಳಿಕ, ಅದನ್ನು ಸುಪ್ರೀಂಕೋರ್ಟ್‌ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುತ್ತದೆ.

ADVERTISEMENT

‘ಒಂದು ಅಥವಾ ಎರಡು ದಿನಗಳ ಕಾಲ ಲಿಪ್ಯಂತರಿಸುವ ಕಾರ್ಯವನ್ನು ಪ್ರಾಯೋಗಿಕವಾಗಿ ಮಾಡಲಾಗುತ್ತದೆ. ಈ ಪ್ರಕ್ರಿಯೆಯಲ್ಲಿ ಕಂಡುಬರುವ ನ್ಯೂನತೆಗಳನ್ನು ಸರಿಪಡಿಸಿದ ನಂತರ ನಿಯಮಿತವಾಗಿ ಈ ಕಾರ್ಯವನ್ನು ಮುಂದುವರಿಸಲಾಗುತ್ತದೆ’ ಎಂದು ಮುಖ್ಯನ್ಯಾಯಮೂರ್ತಿ ಚಂದ್ರಚೂಡ್‌ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.