ADVERTISEMENT

2ಜಿ: ಕೇಂದ್ರದ ಅರ್ಜಿ ಸ್ವೀಕರಿಸಲು ಒಪ್ಪದ ರಿಜಿಸ್ಟ್ರಿ

ಪಿಟಿಐ
Published 2 ಮೇ 2024, 16:29 IST
Last Updated 2 ಮೇ 2024, 16:29 IST
ಸುಪ್ರೀಂ ಕೋರ್ಟ್‌ 
ಸುಪ್ರೀಂ ಕೋರ್ಟ್‌    

ನವದೆಹಲಿ: ದೇಶದ ನೈಸರ್ಗಿಕ ಸಂಪನ್ಮೂಲಗಳನ್ನು ವರ್ಗಾವಣೆ ಮಾಡುವ ಸಂದರ್ಭದಲ್ಲಿ ಸರ್ಕಾರಗಳು ಹರಾಜು ಪ್ರಕ್ರಿಯೆಯನ್ನೇ ಅನುಸರಿಸಬೇಕು ಎಂದು 2012ರಲ್ಲಿ 2ಜಿ ತರಂಗಾಂತರ ಪ್ರಕರಣದಲ್ಲಿ ನೀಡಿದ್ದ ತೀರ್ಪಿನಲ್ಲಿ ಬದಲಾವಣೆ ತರುವಂತೆ ಕೋರಿ ಕೇಂದ್ರ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಸ್ವೀಕರಿಸಲು ಕೋರ್ಟ್‌ನ ರಿಜಿಸ್ಟ್ರಿ ಒಪ್ಪಿಲ್ಲ ಎಂದು ಗೊತ್ತಾಗಿದೆ.

ಕೇಂದ್ರವು ಅಪಾರ್ಥಕ್ಕೆ ಒಳಗಾಗಿ ಅರ್ಜಿಯನ್ನು ಸಲ್ಲಿಸಿದೆ, ಸ್ಪಷ್ಟೀಕರಣ ಕೇಳುವ ನೆಪದಲ್ಲಿ ತೀರ್ಪಿನ ಪುನರ್‌ಪರಿಶೀಲನೆಗೆ ಕೋರುತ್ತಿದೆ ಎಂದು ರಿಜಿಸ್ಟ್ರಿ ಹೇಳಿದೆ ಎನ್ನಲಾಗಿದೆ.

ಎ.ರಾಜಾ ಅವರು ದೂರಸಂಪರ್ಕ ಸಚಿವರಾಗಿದ್ದ ಅವಧಿಯಲ್ಲಿ, 2008ರ ಜನವರಿಯಲ್ಲಿ ಬೇರೆ ಬೇರೆ ಕಂಪನಿಗಳಿಗೆ ಹಂಚಿಕೆ ಮಾಡಿದ್ದ 2ಜಿ ತರಂಗಾಂತರ ಪರವಾನಗಿಗಳನ್ನು 2012ರ ಫೆಬ್ರುವರಿ 2ರಂದು ನೀಡಿದ ತೀರ್ಪಿನಲ್ಲಿ ರದ್ದುಪಡಿಸಿತ್ತು.

ADVERTISEMENT

2ಜಿ ತರಂಗಾಂತರಗಳನ್ನು ವಾಣಿಜ್ಯೇತರ ಉದ್ದೇಶಗಳಿಗೆ ನೀಡುವಾಗ ಹರಾಜು ಪ್ರಕ್ರಿಯೆಯಿಂದ ವಿನಾಯಿತಿ ನೀಡಬೇಕು ಎಂದು ಕೇಂದ್ರವು ಅರ್ಜಿಯಲ್ಲಿ ಕೋರಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.