ADVERTISEMENT

ವಿರಾಟ್‌ ಸಂರಕ್ಷಣೆ: ಖಾಸಗಿ ಸಂಸ್ಥೆಯ ಅರ್ಜಿವಜಾ ಮಾಡಿದ ಸುಪ್ರೀಂ

ಪಿಟಿಐ
Published 12 ಏಪ್ರಿಲ್ 2021, 11:53 IST
Last Updated 12 ಏಪ್ರಿಲ್ 2021, 11:53 IST
ಐಎನ್‌ಎಸ್‌ ವಿರಾಟ್‌ (ಎಎಫ್‌ಪಿ ಚಿತ್ರ)
ಐಎನ್‌ಎಸ್‌ ವಿರಾಟ್‌ (ಎಎಫ್‌ಪಿ ಚಿತ್ರ)   

ನವದೆಹಲಿ: ಸೇವೆ ಸ್ಥಗಿತಗೊಳಿಸಿರುವ ಭಾರತದ ವಿಮಾನವಾಹಕ ಯುದ್ಧನೌಕೆ ಐಎನ್‌ಎಸ್‌ ವಿರಾಟ್‌ ಅನ್ನು ಸಂಗ್ರಹಾಲಯದಲ್ಲಿ ಇಟ್ಟು ಸಂರಕ್ಷಿಸಬೇಕು ಎಂದು ಕೋರಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ಮಂಗಳವಾರ ವಜಾ ಮಾಡಿತು.

ಮುಖ್ಯ ನ್ಯಾಯಮೂರ್ತಿ ಎಸ್‌.ಎ.ಬೊಬಡೆ, ನ್ಯಾಯಮೂರ್ತಿಗಳಾದ ವಿ. ರಾಮಸುಬ್ರಹ್ಮಣಿಯನ್, ಎ.ಎಸ್.ಬೋಪಣ್ಣ ಅವರಿದ್ದ ಪೀಠವು, ‘ಈ ಸಂಬಂಧ ಖಾಸಗಿ ಸಂಸ್ಥೆಯು ಸಲ್ಲಿಸಿದ್ದ ಮನವಿಯನ್ನು ಈಗಾಗಲೇ ರಕ್ಷಣಾ ಇಲಾಖೆಯು ತಿರಸ್ಕರಿಸಿದೆ’ ಎಂಬ ಅಂಶವನ್ನು ಪರಿಗಣಿಸಿತು.

ನೀವು ಹೀಗೇ ಮಾಡಲಾಗದು. ಕೇಂದ್ರಕ್ಕೆ ಮನವಿ ಸಲ್ಲಿಸುವಂತೆ ಬಾಂಬೆ ಹೈಕೋರ್ಟ್‌ ತಿಳಿಸಿದ್ದು, ಅದರಂತೆ ಮಾಡಿದ್ದೀರಿ. ರಕ್ಷಣಾ ಇಲಾಖೆ ಅದನ್ನು ತಳ್ಳಿಹಾಕಿದೆ. ಮತ್ತೆ ಅದನ್ನು ಪ್ರಶ್ನಿಸಲಾಗದು ಎಂದು ಪೀಠವು ಹೇಳಿತು.

ADVERTISEMENT

ವಿಡಿಯೊ ಕಾನ್ಫರೆನ್ಸ್‌ನಲ್ಲಿ ವಿಚಾರಣೆ ನಡೆಯಿತು. ಖಾಸಗಿ ಸಂಸ್ಥೆ ಎನ್ವಿಟೆಕ್‌ ಮರಿನ್‌ ಪ್ರತಿನಿಧಿಸಿದ್ದ ರೂಪಾಲಿ ಶರ್ಮಾ, ಇದು ರಾಷ್ಟ್ರೀಯ ಆಸ್ತಿ. ರಕ್ಷಿಸಿಡುವುದು ಅಗತ್ಯ ಎಂದು ವಾದಿಸಿದ್ದರು. ಇದನ್ನು ಪೀಠ ನಿರಾಕರಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.