ADVERTISEMENT

ಎಎಂಯುಗೆ ಅಲ್ಪಸಂಖ್ಯಾತ ಸ್ಥಾನಮಾನ; ತೀರ್ಪು ಕಾಯ್ದಿರಿಸಿದ ಸುಪ್ರೀಂ ಕೋರ್ಟ್‌

ಪಿಟಿಐ
Published 1 ಫೆಬ್ರುವರಿ 2024, 13:42 IST
Last Updated 1 ಫೆಬ್ರುವರಿ 2024, 13:42 IST
.
.   

ನವದೆಹಲಿ: ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ (ಎಎಂಯು) ಅಲ್ಪಸಂಖ್ಯಾತ ಸ್ಥಾನಮಾನ ನೀಡುವ ಕುರಿತ ತೀರ್ಪನ್ನು ಸುಪ್ರೀಂ ಕೋರ್ಟ್‌ ಗುರುವಾರ ಕಾಯ್ದಿರಿಸಿದೆ.‌

ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್‌ ಅವರ ನೇತೃತ್ವದ ಏಳು ನ್ಯಾಯಮೂರ್ತಿಗಳ ಪೀಠವು ವಾದಿ–ಪ್ರತಿವಾದಿಗಳ (ಉಭಯ ಪಕ್ಷಗಳ?) ವಾದಗಳನ್ನು ಕಳೆದ ಎಂಟು ದಿನಗಳಿಂದ ಆಲಿಸಿದೆ. ನ್ಯಾಯಮೂರ್ತಿಗಳಾದ ಸಂಜೀವ್‌ ಖನ್ನಾ, ಸೂರ್ಯಕಾಂತ್‌, ಜೆ.ಬಿ. ಪಾರ್ದಿವಾಲ, ದೀಪಂಕರ್‌ ದತ್ತಾ, ಮನೋಜ್‌ ಮಿಶ್ರಾ ಹಾಗೂ ಸತೀಶ್‌ ಚಂದ್ರ ಶರ್ಮಾ ಪೀಠದಲ್ಲಿದ್ದಾರೆ.

ಎಎಂಯುಗೆ ಅಲ್ಪಸಂಖ್ಯಾತ ಸ್ಥಾನಮಾನ ನೀಡುವ ಕುರಿತ ವಿಷಯವು ಕಳೆದ ಹಲವು ದಶಕಗಳಿಂದ ಕಾನೂನು ಜಟಿಲದಲ್ಲಿ ಸಿಲುಕಿಕೊಂಡಿದೆ.

ADVERTISEMENT

ಈ ವಿಷಯವನ್ನು ಬಗೆಹರಿಸುವ ಸಲುವಾಗಿ ಪ್ರಕರಣದ ವಿಚಾರಣೆಯನ್ನು ಏಳು ನ್ಯಾಯಮೂರ್ತಿಗಳ ಪೀಠಕ್ಕೆ ವಹಿಸಬೇಕೆಂದು 2019ರ ಫ್ರಬ್ರುವರಿ 12ರಂದು ಸುಪ್ರೀಂ ಕೋರ್ಟ್‌ ಆದೇಶಿಸಿತ್ತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.