ADVERTISEMENT

ಅಸಾರಾಂ ಬಾಪು ಪುತ್ರನಿಗೆ ಪೆರೊಲ್ ನೀಡಿದ್ದ ಹೈಕೋರ್ಟ್ ಆದೇಶ ತಿರಸ್ಕರಿಸಿದ ಸುಪ್ರೀಂ

ಪಿಟಿಐ
Published 20 ಅಕ್ಟೋಬರ್ 2021, 8:10 IST
Last Updated 20 ಅಕ್ಟೋಬರ್ 2021, 8:10 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ಅತ್ಯಾಚಾರ ಆರೋಪದ ಮೇಲೆ ಜೈಲು ಸೇರಿರುವ ಸ್ವಯಂಘೋಷಿತ ದೇವಮಾನವ ಅಸಾರಾಂ ಬಾಪು ಪುತ್ರ ನಾರಾಯಣ ಸಾಯಿಗೆ 14 ದಿನಗಳ ‘ಪೆರೋಲ್‘ ನೀಡಿದ್ದ ಗುಜರಾತ್ ಹೈಕೋರ್ಟ್‌ನ ಆದೇಶವನ್ನು ಸುಪ್ರೀಂ ಕೋರ್ಟ್‌ ಬುಧವಾರ ತಳ್ಳಿ ಹಾಕಿದೆ.

ಗುಜರಾತ್ ಹೈಕೋರ್ಟ್‌ ನಾರಾಯಣ ಸಾಯಿಗೆ ಜೂನ್ 24ರಂದು ಪೆರೋಲ್ ಮಂಜೂರು ಮಾಡಿದ್ದ ಆದೇಶವನ್ನು ಪ್ರಶ್ನಿಸಿ ಗುಜರಾತ್ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ್ ಮತ್ತು ಬಿ.ವಿ.ನಾಗರತ್ನ ಅವನ್ನೊಳಗೊಂಡ ಪೀಠ ಮಾನ್ಯ ಮಾಡಿತು.

‘ಜೈಲಿನಲ್ಲಿದ್ದಾಗ ಸಾಯಿ ಅವರ ಬಳಿ ಮೊಬೈಲ್ ಫೋನ್ ಪತ್ತೆಯಾಗಿರುವುದರಿಂದ, ಅವರಿಗೆ ಪೆರೊಲ್ ನೀಡುವ ವಿಷಯದಲ್ಲಿ ಜೈಲಿನ ಮೇಲ್ವಿಚಾರಕರು ನಕಾರಾತ್ಮಕ ಅಭಿಪ್ರಾಯವನ್ನು ನೀಡಿದ್ದಾರೆ. ಹೀಗಾಗಿ ಪೆರೊಲ್‌ ನೀಡುವುದು ಸೂಕ್ತವಾದ ಕ್ರಮವಲ್ಲ ಹಾಗೂ ಅದು ವಿವಿಧ ಅಂಶಗಳ ಮೇಲೆ ಅವಲಂಬಿತವಾಗಿದೆ‘ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ADVERTISEMENT

ಹೈಕೋರ್ಟ್‌ನ ಏಕಸದಸ್ಯಪೀಠ ಸಾಯಿ ಅವರಿಗೆ ನೀಡಿದ್ದ ಪೆರೋಲ್‌ಗೆ ವಿಭಾಗೀಯ ಪೀಠ ಆಗಸ್ಟ್‌ 12ರಂದು ತಡೆಯಾಜ್ಞೆ ನೀಡಿತ್ತು. ಇದಾದ ಬಳಿಕ ಗುಜರಾತ್‌ ಸರ್ಕಾರ ಸುಪ್ರೀಂಕೋರ್ಟ್‌ ಮೊರೆ ಹೋಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.