ಲಂಡನ್: ಸುಳ್ಳು ಸುದ್ದಿ ಪತ್ತೆ ಮಾಡುವ ವಿಧಾನಗಳನ್ನು ಪಠ್ಯಕ್ರಮದಲ್ಲಿ ಅಳವಡಿಸಲು ಬ್ರಿಟನ್ ಸರ್ಕಾರ ನಿರ್ಧರಿಸಿದೆ.
ಸಾಮಾಜಿಕ ಜಾಲತಾಣಗಳಲ್ಲಿನ ತಪ್ಪು ಮಾಹಿತಿಗಳು ಇತ್ತೀಚೆಗೆ ಬ್ರಿಟನ್‌ನಲ್ಲಿ ನಡೆದ ಗಲಭೆಗೆ ಕಾರಣವಾಗಿತ್ತು. ಹೀಗಾಗಿ, ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ.
‘ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಪಠ್ಯಕ್ರಮಗಳನ್ನು ಪರಿಷ್ಕೃತಗೊಳಿಸಲಾಗುತ್ತಿದೆ. ಯಾವುದೇ ವಿಚಾರದ ಬಗ್ಗೆ ವಿಮರ್ಶೆ ಮಾಡುವಂತೆ ಮತ್ತು ಸಮಾಜ ವಿದ್ರೋಹಿ ವಿಚಾರಗಳ ಬಗ್ಗೆ ಎಚ್ಚರವಹಿಸುವಂತೆ ಹೊಸ ಪಠ್ಯಕ್ರಮದ ಮೂಲಕ ಮಕ್ಕಳಲ್ಲಿ ಅರಿವು ಮೂಡಿಸಲಾಗುವುದು' ಎಂದು ಬ್ರಿಟನ್‌ನ ಶಿಕ್ಷಣ ಕಾರ್ಯದರ್ಶಿ ಬ್ರಿಡ್‌ಗೆಟ್ ಫಿಲಿಪ್‌ಸನ್ ಅವರು ಭಾನುವಾರ ತಿಳಿಸಿದ್ದಾರೆ.
‘ಆನ್‌ಲೈನ್‌ನಲ್ಲಿ ನೋಡುವ ವಿಷಯಗಳ ಬಗ್ಗೆ ವಿಮರ್ಶೆ ನಡೆಸಲು ಬೇಕಾದ ಜ್ಞಾನ ಮತ್ತು ಕೌಶಲವನ್ನು ಯುವಜನರಲ್ಲಿ ರೂಢಿಸುವುದು ಅತ್ಯಗತ್ಯವಾಗಿದೆ’ ಎಂದು ಹೇಳಿದ್ದಾರೆ.
‘ಇತ್ತೀಚೆಗೆ ಬ್ರಿಟನ್‌ನಲ್ಲಿ ನಡೆದ ಹಿಂಸಾಚಾರಕ್ಕೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೆಯಾದ ಸುಳ್ಳು ಮಾಹಿತಿಗಳೇ ಕಾರಣ’ ಎಂದು ಪೊಲೀಸ್ ಅಧಿಕಾರಿಗಳು ಹೇಳಿಕೆ ನೀಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.