ADVERTISEMENT

ಅರುಣಾಚಲ ಪ್ರದೇಶ: ಹೊಸ ಸಸ್ಯ ಪ್ರಭೇದ ಪತ್ತೆ

ಪಿಟಿಐ
Published 18 ಜುಲೈ 2024, 14:17 IST
Last Updated 18 ಜುಲೈ 2024, 14:17 IST
<div class="paragraphs"><p>‘ಫ್ಲೋಗಾಕ್ಯಾಂಥಸ್ ಸುಧಾಂಶುಶೇಖರಿ'  ಸಸ್ಯ</p></div>

‘ಫ್ಲೋಗಾಕ್ಯಾಂಥಸ್ ಸುಧಾಂಶುಶೇಖರಿ' ಸಸ್ಯ

   

ಎಕ್ಸ್‌ ಚಿತ್ರ

ಇಟಾನಗರ: ಅರುಣಾಚಲ ಪ್ರದೇಶದ ವನ್ಯಜೀವಿ ಅಭಯಾರಣ್ಯದಲ್ಲಿ ಭಾರತೀಯ ಬೊಟಾನಿಕಲ್ ಸರ್ವೆ ಆಫ್ ಇಂಡಿಯಾ (ಬಿಎಸ್‌ಐ) ಸಂಶೋಧಕರು ಹೊಸ ಸಸ್ಯ ಪ್ರಭೇದವನ್ನು ಕಂಡುಹಿಡಿದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಪಾಪಮ್ ಪಾರೆ ಜಿಲ್ಲೆಯ ಇಟಾನಗರ ವನ್ಯಜೀವಿ ಅಭಯಾರಣ್ಯದಿಂದ ಇತ್ತೀಚೆಗೆ ಪತ್ತೆಯಾದ ‘ಫ್ಲೋಗಾಕ್ಯಾಂಥಸ್ ಸುಧಾಂಶುಶೇಖರಿ' ಎಂಬ ಸಸ್ಯ ಪ್ರಭೇದವು 'ಅಕ್ಯಾಂಥೇಸಿಯ್ಯಾ' ಕುಟುಂಬದ 'ಫ್ಲೋಗಾಕ್ಯಾಂಥಸ್’ ಜಾತಿಗೆ ಸೇರಿದೆ ಎಂದು ಅವರು ಹೇಳಿದರು.

ಭಾರತೀಯ ಹಿಮಾಲಯ ಪ್ರದೇಶದಲ್ಲಿ ಸಸ್ಯ ಮತ್ತು ಪರಿಸರ ಸಂಶೋಧನೆಗೆ ಮಹತ್ವದ ಕೊಡುಗೆ ನೀಡಿದ ಬಿಎಸ್‌ಐ ವಿಜ್ಞಾನಿ ಡಾ. ಸುಧಾಂಶು ಶೇಖರ್ ದಾಸ್ ಅವರನ್ನು ಗೌರವಿಸಲು ಈ ಹೊಸ ಸಸ್ಯ ಪ್ರಭೇದಕ್ಕೆ ಅವರ ಹೆಸರಿಸಲಾಗಿದೆ ಎಂದು ಬಿಎಸ್‌ಐ ಅಧಿಕಾರಿಗಳು ತಿಳಿಸಿದ್ದಾರೆ.

ಲೇಖಕರಾದ ಸಾಮ್ರಾಟ್ ಗೋಸ್ವಾಮಿ ಮತ್ತು ರೋಹನ್ ಮೈತಿ ಅವರು ಈ ಪ್ರಭೇದದ ಬಗ್ಗೆ ವಿವರವಾದ ಸಂಶೋಧನಾ ಪ್ರಬಂಧವನ್ನು ‘ಇಂಡಿಯನ್ ಜರ್ನಲ್ ಆಫ್ ಫಾರೆಸ್ಟ್ರಿ’ಯಲ್ಲಿ ಪ್ರಕಟಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.