ADVERTISEMENT

ಕರ್ನಾಟಕ, ತೆಲಂಗಾಣ ಗಡಿ ಬಂದ್‌ಗೆ ಶಿವಸೇನಾ ಆಗ್ರಹ

ಪಿಟಿಐ
Published 23 ಅಕ್ಟೋಬರ್ 2024, 16:23 IST
Last Updated 23 ಅಕ್ಟೋಬರ್ 2024, 16:23 IST
ಶಿವಸೇನಾ
ಶಿವಸೇನಾ   

ಮುಂಬೈ: ಕಾಂಗ್ರೆಸ್‌ ಆಡಳಿತವಿರುವ ಕರ್ನಾಟಕ ಮತ್ತು ತೆಲಂಗಾಣದಿಂದ ಮಹಾರಾಷ್ಟ್ರಕ್ಕೆ ನೂರಾರು ಕೋಟಿ ಹಣ ಹರಿದು ಬರುತ್ತಿದೆ ಎಂದು ಆರೋಪಿಸಿರುವ ಏಕನಾಥ ಶಿಂದೆ ನೇತೃತ್ವದ ಶಿವಸೇನಾ ಪಕ್ಷವು, ಈ ಎರಡೂ ರಾಜ್ಯಗಳ ಗಡಿಗಳನ್ನು ಬಂದ್‌ ಮಾಡುವಂತೆ ಚುನಾವಣಾ ಆಯೋಗವನ್ನು ಆಗ್ರಹಿಸಿದೆ.

ಈ ಎರಡೂ ರಾಜ್ಯಗಳ ಜತೆ ಮಹಾರಾಷ್ಟ್ರ ಗಡಿ ಹಂಚಿಕೊಂಡಿದೆ. ಈ ರಾಜ್ಯಗಳೇ ಅಲ್ಲದೆ, ಇಲ್ಲಿನ ವಿಧಾನಸಭಾ ಚುನಾವಣೆಗೆ ವಿದೇಶಗಳಿಂದಲೂ ಹಣ ಬರುತ್ತಿದೆ ಎಂದು ಅದು ದೂರಿದೆ. 

ಕಾಂಗ್ರೆಸ್‌ ಆಡಳಿತವಿರುವ ಈ ಎರಡೂ ರಾಜ್ಯಗಳಿಂದ ನೂರಾರು ಕೋಟಿ ಹಣ ಮಹಾ ವಿಕಾಸ್‌ ಅಘಾಡಿಗೆ (ಎಂವಿಎ) ಹರಿದು ಬರುತ್ತಿದೆ ಎಂದು ಸೇನಾ ಕಾರ್ಯದರ್ಶಿ ಮತ್ತು ಮುಖ್ಯ ವಕ್ತಾರ ಕಿರಣ್‌ ಪಾವಸ್ಕರ್‌ ತಿಳಿಸಿದ್ದಾರೆ. ಈ ಸಂಬಂಧ ಶಿವಸೇನಾ ಚುನಾವಣಾ ಆಯೋಗಕ್ಕೆ ಅರ್ಜಿ ಸಲ್ಲಿದೆ.

ADVERTISEMENT

ಚುನಾವಣೆ ವೇಳೆ ಈ ಎರಡೂ ರಾಜ್ಯಗಳು ಮತ್ತು ವಿದೇಶಗಳಿಂದ ಬರುತ್ತಿರುವ ಹಣದ ಬಗ್ಗೆ ತನಿಖೆ ಆಗಬೇಕಿದೆ ಎಂದು ಅವರು ಆಗ್ರಹಿಸಿದ್ದಾರೆ. 

ಲೋಕಸಭಾ ಚುನಾವಣೆ ಸಂದರ್ಭದಲ್ಲೂ ಈ ಎರಡೂ ರಾಜ್ಯಗಳಿಂದ ಹಣ ಹರಿದು ಬಂದಿತ್ತು. ಅದರ ಪರಿಣಾಮ ‘ಮಹಾಯುತಿ’ ಮೇಲೆ ಬಿದ್ದಿತು. ಆದ್ದರಿಂದ ಕರ್ನಾಟಕ ಮತ್ತು ತೆಲಂಗಾಣ ರಾಜ್ಯಗಳ ಗಡಿಗಳನ್ನು ಮುಚ್ಚಬೇಕಾದ ಅಗತ್ಯವಿದೆ ಎಂದು ಶಿವಸೇನಾ ಪ್ರತಿಪಾದಿಸಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.