ADVERTISEMENT

ಜಮ್ಮು | ಕಥುವಾ ಗಡಿ ಬಳಿ ಅನುಮಾನಾಸ್ಪದ ಚಲನವಲನ; ಶೋಧ ಆರಂಭಿಸಿದ ಭದ್ರತಾ ಪಡೆ

ಪಿಟಿಐ
Published 19 ಮೇ 2024, 5:02 IST
Last Updated 19 ಮೇ 2024, 5:02 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕಥುವಾ ಜಿಲ್ಲೆಯ ಅಂತರರಾಷ್ಟ್ರೀಯ ಗಡಿಯ ಸಮೀಪ ಮೂವರು ವ್ಯಕ್ತಿಗಳ ಅನುಮಾನಾಸ್ಪದ ಚಲನವಲನ ಕಂಡುಬಂದಿದ್ದು, ಭಯೋತ್ಪಾಕರಿರಬಹುದು ಎಂಬ ಶಂಕೆ ಹಿನ್ನೆಲೆಯಲ್ಲಿ ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಶನಿವಾರ ಮಧ್ಯರಾತ್ರಿ ವೇಳೆ ಹೀರಾನಗರ ಪ್ರದೇಶದ ಜಂಗಿ ಚಾಕ್‌ ಬಳಿಯ ತರ್ನಾಹ್‌ ನಾಲಾದಲ್ಲಿ ಶಂಕಿತರ ಚಲನವಲನಗಳನ್ನು ವಿಶೇಷ ಪೊಲೀಸ್‌ ಅಧಿಕಾರಿಯೊಬ್ಬರು (ಎಸ್‌ಪಿಒ) ವರದಿ ಮಾಡಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ADVERTISEMENT

‌ಸುಳಿವು ದೊರೆತ ತಕ್ಷಣವೇ ಗಡಿ ಪ್ರದೇಶಗಳಲ್ಲಿ ಎಚ್ಚರಿಕೆ ನೀಡಲಾಗಿದೆ. ಪೊಲೀಸರು, ಭದ್ರತಾ ಪಡೆಯ ಸಿಬ್ಬಂದಿ ಜಂಟಿ ಹುಡುಕಾಟ ನಡೆಸುತ್ತಿದ್ದಾರೆ. ರಾಖ್‌ ಸರ್ಕಾರ್‌ ಪಾಲ್ಹಿ ಮತ್ತು ಪಥ್ವಾಲ್‌ ಸೇರಿದಂತೆ ತರ್ನಾಹ್‌ ನಾಲಾ ಹಾಗೂ ಪಕ್ಕದ ಗ್ರಾಮಗಳಲ್ಲಿ ಶೋಧ ಕಾರ್ಯ ನಡೆಯುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.