ADVERTISEMENT

ಜಮ್ಮು ಮತ್ತು ಕಾಶ್ಮೀರ | ಶೋಧ ಕಾರ್ಯಾಚರಣೆ ವಿಸ್ತರಿಸಿದ ಸೇನೆ

ಪಿಟಿಐ
Published 30 ಸೆಪ್ಟೆಂಬರ್ 2024, 14:29 IST
Last Updated 30 ಸೆಪ್ಟೆಂಬರ್ 2024, 14:29 IST
<div class="paragraphs"><p>ಸೇನೆ</p></div>

ಸೇನೆ

   

ಜಮ್ಮು: ಉಗ್ರರ ದಮನ ಕಾರ್ಯಾಚರಣೆಯನ್ನು ತೀವ್ರಗೊಳಿಸಿರುವ ಸೇನೆಯು, ಜಮ್ಮು– ಕಾಶ್ಮೀರದ ಕಠುವಾ ಹಾಗೂ ರಜೌರಿ ಜಿಲ್ಲೆಗಳಲ್ಲಿ ತನ್ನ ಶೋಧವನ್ನು ವಿಸ್ತರಿಸಿದೆ.

ಕಠುವಾ ಜಿಲ್ಲೆಯ ಬಿಲ್ಲವರ ತಹಸಿಲ್‌ನ ಕೋಗ್-ಮಂಡಲಿಯಲ್ಲಿ ಶನಿವಾರ ಸಂಜೆ ನಡೆದ ಭೀಕರ ಗುಂಡಿನ ಚಕಮಕಿಯಲ್ಲಿ ಪೊಲೀಸ್ ಸಿಬ್ಬಂದಿಯೊಬ್ಬರು ಹುತಾತ್ಮರಾದರೆ, ಉಗ್ರನೊಬ್ಬ ಹತನಾಗಿದ್ದ. ಪೊಲೀಸ್‌ ಅಧಿಕಾರಿಗಳಿಬ್ಬರು ಗಾಯಗೊಂಡಿದ್ದರು.

ADVERTISEMENT

ರಜೌರಿ ಜಿಲ್ಲೆಯ ಥನಮಂಡಿ ಪ್ರದೇಶದ ಮನಿಯಾಲ್ ಗಾಲಿಯಲ್ಲಿ ಭಾನುವಾರ ಸಂಜೆ ಗುಂಡಿನ ಚಕಮಕಿ ನಡೆದಿದೆ.

ಕಠುವಾ ಜಿಲ್ಲೆಯಲ್ಲಿ ಮೂರು ದಿನದಿಂದಲೂ ಶೋಧ ಕಾರ್ಯಾಚರಣೆ ನಡೆಯುತ್ತಿದ್ದು, ಸೋಮವಾರ ಬಿರುಸು ಪಡೆದಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.