ವಾಷಿಂಗ್ಟನ್: 2024ನೇ ಆರ್ಥಿಕ ವರ್ಷದಲ್ಲಿ ಎಚ್–1ಬಿ ವೀಸಾ ಹಂಚಿಕೆಗಾಗಿ ಎರಡನೇ ಸುತ್ತಿನ ಲಾಟರಿ ಆಯ್ಕೆ ಪ್ರಕ್ರಿಯೆ ಶೀಘ್ರದಲ್ಲಿಯೇ ನಡೆಯಲಿದೆ ಎಂದು ಅಮೆರಿಕದ ಇಮಿಗ್ರೇಷನ್ ಏಜೆನ್ಸಿಯು ಗುರುವಾರ ಪ್ರಕಟಿಸಿದೆ.
ಈ ವರ್ಷಕ್ಕೆ ನಿಗದಿಯಾಗಿರುವ ಗುರಿ ತಲುಪಲು ‘ಹೆಚ್ಚುವರಿ ನೋಂದಣಿ’ಯಿಂದ ಆಯ್ಕೆ ಪ್ರಕ್ರಿಯೆಯು ಅಗತ್ಯವಾಗಿದೆ ಎಂದು ಏಜೆನ್ಸಿಯು ಅಭಿಪ್ರಾಯಪಟ್ಟಿದೆ. ಈ ನಿರ್ಧಾರದಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಾರತ ಮೂಲದ ವೃತ್ತಿಪರರಿಗೆ ನೆರವಾಗಲಿದೆ.
ಅಮೆರಿಕ ಪೌರತ್ವ ಮತ್ತು ವಲಸಿಗರ ಸೇವೆ (ಯುಎಸ್‌ಸಿಐಎಸ್) ವಿಭಾಗವು ಈ ಕುರಿತ ಹೇಳಿಕೆಯಲ್ಲಿ, ಈಗಾಗಲೇ ವಿದ್ಯುನ್ಮಾನ ನೋಂದಣಿ ಪ್ರಕ್ರಿಯೆ ಮೂಲಕ ಸಲ್ಲಿಸಿರುವ ಅರ್ಜಿಗಳಲ್ಲಿ ರ‍್ಯಾಂಡಮ್ ಮಾದರಿಯಲ್ಲಿ ಹೆಚ್ಚುವರಿ ನೋಂದಣಿಗಳ ಆಯ್ಕೆ ನಡೆಯಲಿದೆ ಎಂದು ತಿಳಿಸಿದೆ.
ಮಾರ್ಚ್ ತಿಂಗಳಲ್ಲಿ ಮೊದಲ ಸುತ್ತಿನ ಆಯ್ಕೆ ಪ್ರಕ್ರಿಯೆ ನಡೆದಿತ್ತು. 2024ನೇ ಹಣಕಾಸು ವರ್ಷಕ್ಕಾಗಿ ನೋಂದಣಿ ಮಾಡಿರುವವರು ಮಾತ್ರ ಎಚ್–1ಬಿ ವೀಸಾಗೆ ಅರ್ಹರಾಗಿದ್ದಾರೆ. ನೋಂದಣಿ ಪ್ರಕ್ರಿಯೆಯು ಏಪ್ರಿಲ್ 1, 2023ರಿಂದ ಜೂನ್ 30, 2023ರವರೆಗೆ ನಡೆದಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.