ADVERTISEMENT

ಪ್ರಧಾನಿ ಮೋದಿ ವಿರುದ್ಧ ಸಂಚು: ಪಂಜಾಬ್‌ ಸರ್ಕಾರದ ವಿರುದ್ಧ ಕಿರಣ್‌ ಬೇಡಿ ಕಿಡಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 8 ಜನವರಿ 2022, 10:55 IST
Last Updated 8 ಜನವರಿ 2022, 10:55 IST
ಕಿರಣ್‌ ಬೇಡಿ
ಕಿರಣ್‌ ಬೇಡಿ   

ನವದೆಹಲಿ: ಪಂಜಾಬ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸೂಕ್ತ ಭದ್ರತೆ ಒದಗಿಸುವಲ್ಲಿಅಲ್ಲಿನ ಕಾಂಗ್ರೆಸ್‌ ಸರ್ಕಾರ ವಿಫಲವಾಗಿದೆ ಎಂದು ಪುದುಚೇರಿಯ ಮಾಜಿ ಲೆಫ್ಟಿನಂಟ್‌ ಗವರ್ನರ್‌ ಕಿರಣ್‌ ಬೇಡಿ ಆರೋಪಿಸಿದ್ದಾರೆ.

ಪ್ರಧಾನಿ ಮೋದಿ ಅವರು ಪಂಜಾಬ್‌ನಲ್ಲಿ ₹ 42,750 ಕೋಟಿ ಮೊತ್ತದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲುಬುಧವಾರ (ಜನವರಿ 5ರಂದು) ಸಮಯ ನಿಗದಿಯಾಗಿತ್ತು. ಆದರೆ, ಫಿರೋಜ್‌ಪುರದಲ್ಲಿ ಭದ್ರತಾ ಲೋಪ ಉಂಟಾದ ಕಾರಣ ರ್‍ಯಾಲಿ ಸೇರಿದಂತೆ ಯಾವುದೇ ಕಾರ್ಯಕ್ರಮಕ್ಕೆ ಹಾಜರಾಗದೆ ಪಂಜಾಬ್‌ನಿಂದ ಮರಳಿದ್ದರು.

ಈ ಬಗ್ಗೆ ಮಾತನಾಡಿರುವ ಕಿರಣ್‌ ಬೇಡಿ, ʼಪೊಲೀಸ್‌ ಮಹಾ ನಿರ್ದೇಶಕರ ಗೈರುಹಾಜರಿಯಲ್ಲಾದ ಮೊದಲ ಭದ್ರತಾ ಲೋಪವಿದು. ರಾಜ್ಯ ಗೃಹ ಸಚಿವರು ಮತ್ತು ಗೃಹ ಇಲಾಖೆ ಕಾರ್ಯದರ್ಶಿಯವರೂ ಹಾಜರಿರಲಿಲ್ಲ. ಜಿಲ್ಲಾಧಿಕಾರಿಗಳೂ ಗೈರಾಗಿದ್ದರು. ಈ ಭದ್ರತಾ ಲೋಪವು ಪೂರ್ವ ಯೋಜಿತ ಪಿತೂರಿಯಾಗಿತ್ತೇ?ʼ ಎಂದು ಶಂಕಿಸಿದ್ದಾರೆ.

ʼಪ್ರಧಾನಮಂತ್ರಿ ವಿರುದ್ಧದ ಸಂಚಿನ ಸ್ಪಷ್ಟ ಪ್ರಕರಣವಿದುʼ ಎಂದೂ ದೂರಿದ್ದಾರೆ.

ADVERTISEMENT

ಇದೇ ವಿಚಾರವಾಗಿಬಿಜೆಪಿಯ ಹಲವು ನಾಯಕರು, ಪಂಜಾಬ್‌ ಸರ್ಕಾರವನ್ನು ವಜಾ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ಇದನ್ನೂ ಓದಿ:

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.