ಚೆನ್ನೈ:ಯಾವುದೇ ಸಂಭಾವ್ಯತೆಯನ್ನು ಎದುರಿಸಲು ಭದ್ರತಾ ಪಡೆಗಳು ಸನ್ನದ್ಧವಾಗಿವೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ತಿಳಿಸಿದರು.
ಬಾಲಾಕೋಟ್‌ನಲ್ಲಿ ಉಗ್ರರ ಶಿಬಿರಗಳು ಮತ್ತೆ ಸಕ್ರಿಯವಾಗಿರುವ ಬಗ್ಗೆ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ನೀಡಿರುವ ಮಾಹಿತಿಗೆ ಸಂಬಂಧಿಸಿ ಕೇಳಲಾದ ಪ್ರಶ್ನೆಗೆ ಅವರು ಈ ಪ್ರತಿಕ್ರಿಯೆ ನೀಡಿದರು.
ಇದನ್ನೂ ಓದಿ:ಬಾಲಾಕೋಟ್ ಶಿಬಿರಗಳು ಮತ್ತೆ ಸಕ್ರಿಯ: ರಾವತ್
‘ಯಾವುದೇ ಆತಂಕ ಬೇಡ. ನಮ್ಮ ಭದ್ರತಾಪಡೆಗಳು ಸರ್ವಸನ್ನದ್ಧವಾಗಿವೆ’ ಎಂದು ಅವರು ಹೇಳಿದರು.
ವಾಯುಪಡೆಯು ಫೆಬ್ರುವರಿಯಲ್ಲಿ ವಾಯುದಾಳಿ ನಡೆಸಿ ನಾಶ ಮಾಡಿದ್ದ ಬಾಲಾಕೋಟ್‌ನ ಉಗ್ರರ ಶಿಬಿರಗಳನ್ನು ಪಾಕಿಸ್ತಾನವು ಮತ್ತೆ ಸಕ್ರಿಯಗೊಳಿಸಿದೆ. ಸುಮಾರು 500 ಉಗ್ರರು ಭಾರತದೊಳಕ್ಕೆ ನುಸುಳಲು ಪ್ರಯತ್ನಿಸುತ್ತಿದ್ದಾರೆ ಎಂದು ಸೇನೆಯ ಮುಖ್ಯಸ್ಥ ಬಿಪಿನ್ ರಾವತ್ ಸೋಮವಾರ ತಿಳಿಸಿದ್ದರು.
ಆದರೆ, ರಾವತ್ ಹೇಳಿಕೆ ಆಧಾರರಹಿತ ಎಂದು ಪಾಕಿಸ್ತಾನ ಹೇಳಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.