ಇಂಫಾಲ: ಮಣಿಪುರದ ಜಿರೀಬಾಮ್ ಮತ್ತು ಚುರ್ಚಂದಪುರ ಜಿಲ್ಲೆಗಳಲ್ಲಿ ಕಾರ್ಯಾಚರಣೆ ನಡೆಸಿದ ಭದ್ರತಾ ಪಡೆ ಅಪಾರ ಪ್ರಮಾಣದ ಶಸ್ತ್ರಾಸ್ತ್ರ ಹಾಗೂ ಮದ್ದುಗುಂಡುಗಳನ್ನು ವಶಪಡಿಸಿಕೊಂಡಿವೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.
ಜಿರೀಬಾಮ್ ಜಿಲ್ಲೆಯ ಚಂಪಾನಗರ, ನಾರಾಯಣಪುರ ಮತ್ತು ತಂಗ್ಬೋಪುಂಜ್ರೆ ಪ್ರದೇಶಗಳಲ್ಲಿ ಭದ್ರತಾ ಪಡೆ ಬುಧವಾರ ಶೋಧ ಕಾರ್ಯಾಚರಣೆ ನಡೆಸಿವೆ. ಈ ವೇಳೆ 2 ಇಂಚಿನ ತೋಪು, 36 ಸಜೀವ ಗುಂಡುಗಳನ್ನು ವಶಪಡಿಸಿಕೊಂಡಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಚುರ್ಚಂದಪುರ ಜಿಲ್ಲೆಯ ಎಚ್.ಕೋಟ್ಲಿಯನ್ ಗ್ರಾಮದಲ್ಲಿ 303 ರೈಫಲ್, ಒಂದು 9 ಎಂಎಂ ಪಿಸ್ತೂಲ್, ಎರಡು ಸ್ಥಳೀಯ ನಿರ್ಮಿತ ಫಿರಂಗಿ ಹಾಗೂ 5 ಎಕೆ 47 ಬಂದೂಕು ಸೇರಿದಂತೆ ಹಲವು ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದೂ ಅವರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.