ADVERTISEMENT

ಮಣಿಪುರ ಹಿಂಸಾಚಾರ | ಭದ್ರತೆ ಹೆಚ್ಚಳದಿಂದ ಪರಿಸ್ಥಿತಿ ನಿಯಂತ್ರಣಕ್ಕೆ: ಪೊಲೀಸರು

ಪಿಟಿಐ
Published 8 ಸೆಪ್ಟೆಂಬರ್ 2024, 11:31 IST
Last Updated 8 ಸೆಪ್ಟೆಂಬರ್ 2024, 11:31 IST
<div class="paragraphs"><p>ಭದ್ರತೆ ಹೆಚ್ಚಳ</p></div>

ಭದ್ರತೆ ಹೆಚ್ಚಳ

   

ಇಂಫಾಲ್‌: ಮಣಿಪುರದ ಜಿರಿಬಾಮ್‌ನಲ್ಲಿ ಶನಿವಾರ ನಡೆದ ಹಿಂಸಾಚಾರದಲ್ಲಿ ಐವರು ಮೃತಪಟ್ಟಿದ್ದು, ಭದ್ರತೆಯನ್ನು ಹೆಚ್ಚಿಸಲಾಗಿದೆ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ಸದ್ಯದ ಪರಿಸ್ಥಿತಿಯು ಉದ್ವಿಗ್ನಗೊಂಡಿದ್ದರೂ, ನಿಯಂತ್ರಣದಲ್ಲಿದೆ ಎಂದಿದ್ದಾರೆ.

ADVERTISEMENT

‘ಭಾನುವಾರ ಹಿಂಸಾಚಾರ ನಡೆದ ಘಟನೆಗಳು ವರದಿಯಾಗಿಲ್ಲ. ಭದ್ರತಾ ಪಡೆಗಳ ಸಮನ್ವಯದೊಂದಿಗೆ ವಿವಿಧ ಜಿಲ್ಲೆಗಳ ಪೊಲೀಸ್ ವರಿಷ್ಠಾಧಿಕಾರಿಗಳು ಪರಿಸ್ಥಿತಿಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿದ್ದಾರೆ’ ಎಂದು ಹೇಳಿದ್ದಾರೆ.

ಐವರ ಸಾವು: ಜಿರಿಬಾಮ್‌ನಲ್ಲಿ ಶನಿವಾರ ಮನೆಯೊಂದಕ್ಕೆ ನುಗ್ಗಿದ ಉಗ್ರರು, ನಿದ್ರಿಸುತ್ತಿದ್ದ ವ್ಯಕ್ತಿಯ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ. ಈ ಕೊಲೆಯ ನಂತರ ಕಾದಾಡುತ್ತಿರುವ ಸಮುದಾಯಗಳ ಸದಸ್ಯರ ನಡುವೆ ಭಾರಿ ಗುಂಡಿನ ಕಾಳಗ ನಡೆದಿದ್ದು, ಶಸ್ತ್ರಸಜ್ಜಿತ ನಾಲ್ವರು ಮೃತಪಟ್ಟಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ.

ಏತನ್ಮಧ್ಯೆ, ಜಿರಿಬಾಮ್ ಜಿಲ್ಲೆಯಲ್ಲಿ ಶನಿವಾರ ರಾತ್ರಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

ಡ್ರೋನ್‌ ದಾಳಿ: ಜನಾಂಗೀಯ ಹಿಂಸಾಚಾರಕ್ಕೆ ತತ್ತರಿಸಿರುವ ಮಣಿಪುರದಲ್ಲಿ ಇದೀಗ ಡ್ರೋನ್ ಬಳಸಿ ದಾಳಿ ನಡೆಸಲಾಗುತ್ತಿದೆ. ಇಂಫಾಲ್ ಪಶ್ಚಿಮ ಜಿಲ್ಲೆಯ ಕೌಟ್ರುಕ್‌ ಗ್ರಾಮದಲ್ಲಿ ಸೆ.1ರಂದು ಮೊದಲ ಬಾರಿಗೆ ಡ್ರೋನ್ ಮೂಲಕ ದಾಳಿ ನಡೆಸಲಾಗಿದೆ. ಮರುದಿನ ಸೆಂಜಾಮ್ ಚಿರಾಂಗ್‌ನಲ್ಲಿ ಡ್ರೋನ್‌ ದಾಳಿ ನಡೆದಿದೆ. ಈ ಘಟನೆಗಳಲ್ಲಿ ಇಬ್ಬರು ಮೃತಪಟ್ಟು, 12 ಜನರು ಗಾಯಗೊಂಡಿದ್ದಾರೆ.

‘ದಾಳಿ ನಡೆಸುವ ಸಾಮರ್ಥ್ಯ ಹೊಂದಿರುವ ಯಾವುದೇ ಡ್ರೋನ್‌ಗಳನ್ನು ಹಿಮ್ಮೆಟ್ಟಿಸಲು ಅಸ್ಸಾಂ ರೈಫಲ್ಸ್‌ ಪಡೆಯು ಇಂಫಾಲ್ ಕಣಿವೆಯ ಅಂಚಿನ ಪ್ರದೇಶಗಳಲ್ಲಿ ಡ್ರೋನ್ ವಿರೋಧಿ ವ್ಯವಸ್ಥೆಯನ್ನು ನಿಯೋಜಿಸಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.