ADVERTISEMENT

ಸ್ವಾವಲಂಬನೆಯು ಆಯ್ಕೆಯಲ್ಲ, ಅನಿವಾರ್ಯತೆ: ರಾಜನಾಥ್ ಸಿಂಗ್‌

​ಪ್ರಜಾವಾಣಿ ವಾರ್ತೆ
Published 17 ಜೂನ್ 2023, 11:22 IST
Last Updated 17 ಜೂನ್ 2023, 11:22 IST
ಲಖನೌದಲ್ಲಿ ಶನಿವಾರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಆತ್ಮನಿರ್ಭರ ಭಾರತ್‌ ಕುರಿತು ಮಾತನಾಡಿದರು –ಪಿಟಿಐ ಚಿತ್ರ
ಲಖನೌದಲ್ಲಿ ಶನಿವಾರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಆತ್ಮನಿರ್ಭರ ಭಾರತ್‌ ಕುರಿತು ಮಾತನಾಡಿದರು –ಪಿಟಿಐ ಚಿತ್ರ   

ಲಖನೌ: ‘ಜಾಗತಿಕ ವಿದ್ಯಮಾನಗಳು ತೀವ್ರಗತಿಯಲ್ಲಿ ಬದಲಾಗುತ್ತಿರುವ ಈಗಿನ ಹೊತ್ತಿನಲ್ಲಿ ಸ್ವಾವಲಂಬನೆ ಎಂಬುದು ಆಯ್ಕೆಯಷ್ಟೇ ಅಲ್ಲ, ಅನಿವಾರ್ಯ ಅಗತ್ಯ’ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಶನಿವಾರ ಅಭಿಪ್ರಾಯಪಟ್ಟರು.  

‘1971ರ ಯುದ್ಧದ ಸಂದರ್ಭದಲ್ಲಿ ನಮಗೆ ಹೆಚ್ಚಿನ ಶಸ್ತ್ರಾಸ್ತ್ರಗಳ ಅಗತ್ಯವಿತ್ತು. ಆದರೆ, ನಿರಾಕರಿಸಲಾಯಿತು. ಆಗ ನಾವು ಪರ್ಯಾಯಗಳತ್ತ ದೃಷ್ಟಿಹರಿಸಿದೆವು. ಆದರೆ, ನಮಗೆ ಶಸ್ತ್ರಾಸ್ತ್ರಗಳನ್ನು ನಿರಾಕರಿಸಿದ್ದ ರಾಷ್ಟ್ರಗಳ ಹೆಸರು ಉಲ್ಲೇಖಿಸಲು ಬಯಸುವುದಿಲ್ಲ’ ಎಂದು ಹೇಳಿದರು.

1999ರ ಕಾರ್ಗಿಲ್‌ ಯುದ್ಧದ ಸಂದರ್ಭದಲ್ಲಿಯೂ ನಾವು ಇಂತಹುದೇ ಸ್ಥಿತಿಯನ್ನು ಎದುರಿಸಿದೆವು. ನಮಗೆ ಶಾಂತಿಯ ಮಂತ್ರ ಬೋಧಿಸುವ, ಸಾಮಾನ್ಯವಾಗಿ ಶಸ್ತ್ರಾಸ್ತ್ರಗಳನ್ನು ಪೂರೈಸುತ್ತಿದ್ದ ರಾಷ್ಟ್ರಗಳೂ ಪೂರೈಕೆಗೆ ನಿರಾಕರಿಸಿದ್ದವು ಎಂದು ತಿಳಿಸಿದರು.

ADVERTISEMENT

ಆ ನಂತರ ನಮ್ಮ ಸಾಮರ್ಥ್ಯ ಬಲಪಡಿಸುವುದಕ್ಕಿಂತಲೂ ಬೇರೆ ಆಯ್ಕೆಗಳು ಇರಲಿಲ್ಲ. ಈಗ ದೇಶ ಸ್ವಾವಲಂಬನೆಯ ಹಾದಿಯಲ್ಲಿದೆ. ಭೂಮಿಯಿಂದ ಆಗಸದವರೆಗೆ, ಕೃಷಿ ಪರಿಕರಗಳಿಂದ ಕ್ರಯೋಜನಿಕ್‌ ಎಂಜಿನ್‌ವರೆಗೂ ನಾವೀಗ ಸ್ವಾವಲಂಬನೆಯ ಹಾದಿಯಲ್ಲಿದ್ದೇವೆ ಎಂದು ತಿಳಿಸಿದರು.

ಬದಲಾಗುತ್ತಿರುವ ಜಗತ್ತಿನಲ್ಲಿ ಸ್ವಾವಲಂಬನೆ ಎಂಬುದು ಅನಿವಾರ್ಯವಾಗಿದೆ. ದೇಶದ ಭದ್ರತೆಗೆ ನೇರವಾಗಿ ಸಂಬಂಧವಿರುವ ರಕ್ಷಣಾ ವಲಯದಲ್ಲಿ ಇದು ಅಗತ್ಯವೂ ಆಗಿದೆ ಎಂದು ಹೇಳಿದರು. ‘ಆತ್ಮನಿರ್ಭರ ಭಾರತ್’ ಕುರಿತ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.