ADVERTISEMENT

ಸ್ವಾರ್ಥಕ್ಕಾಗಿ ಜಾರ್ಖಂಡ್‌ನಲ್ಲಿ ಮೈತ್ರಿ ಸರ್ಕಾರ ರಚನೆ: ಜೆ.ಪಿ ನಡ್ಡಾ ಟೀಕೆ

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಜಗತ್ ಪ್ರಸಾದ್‌ ನಡ್ಡಾ ಟೀಕೆ

ಪಿಟಿಐ
Published 17 ನವೆಂಬರ್ 2024, 15:34 IST
Last Updated 17 ನವೆಂಬರ್ 2024, 15:34 IST
ಜೆ.ಪಿ. ನಡ್ಡಾ
ಜೆ.ಪಿ. ನಡ್ಡಾ   

ಧನ್‌ಬಾದ್: ‘ವೋಟ್‌ ಬ್ಯಾಂಕ್‌ ಮತ್ತು ಕುಟುಂಬ ರಾಜಕಾರಣವನ್ನು ಉತ್ತೇಜಿಸುವ ‘ಸ್ವಾರ್ಥ ಉದ್ದೇಶ’ಗಳಿಗಾಗಿ ಜಾರ್ಖಂಡ್‌ನಲ್ಲಿ ಮೈತ್ರಿ ರಚನೆಯಾಯಿತು’ ಎಂದು ಜೆಎಂಎಂ ನೇತೃತ್ವದ ಸಮ್ಮಿಶ್ರ ಸರ್ಕಾರದ ವಿರುದ್ಧ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಜೆ.ಪಿ ನಡ್ಡಾ ಟೀಕೆ ಮಾಡಿದ್ದಾರೆ. 

ಧನ್‌ಬಾದ್‌ ಜಿಲ್ಲೆಯ ಸಿಂದ್ರಿಯಲ್ಲಿ ಚುನಾವಣಾ ರ್‍ಯಾಲಿಯಲ್ಲಿ ಮಾತನಾಡಿದ ನಡ್ಡಾ ಅವರು ‘ರಾಜ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಅಭಿವೃದ್ಧಿ ಕಾರ್ಯಗಳಿಗೆ ಮುಖ್ಯಮಂತ್ರಿ ಹೇಮಂತ್‌ ಸೋರೆನ್ ಅವರು ಅಡ್ಡಿಪಡಿಸುತ್ತಿದ್ದಾರೆ. ಸರ್ಕಾರವು ₹4,000 ಕೋಟಿ ಜಲ ಜೀವನ ಮಿಷನ್‌ ಹಗರಣ, ₹5,000 ಕೋಟಿ ಗಣಿಗಾರಿಕೆ ಹಗರಣ ಹಾಗೂ ₹236 ಕೋಟಿ ಭೂ ಹಗರಣದಲ್ಲಿ ತೊಡಗಿದೆ’ ಎಂದು ಆರೋಪಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT