ADVERTISEMENT

ಮರಾಠಿ ಸಾಹಿತ್ಯ ಸಮ್ಮೇಳನ: ನಯನತಾರ ಸೆಹಗಲ್‌ ಕೈಬಿಟ್ಟಿರುವುದಕ್ಕೆ ಶಿವಸೇನ ಖಂಡನೆ

​ಪ್ರಜಾವಾಣಿ ವಾರ್ತೆ
Published 8 ಜನವರಿ 2019, 10:41 IST
Last Updated 8 ಜನವರಿ 2019, 10:41 IST
ನಯನತಾರ ಸೆಹಗಲ್‌
ನಯನತಾರ ಸೆಹಗಲ್‌   

ಮುಂಬೈ: ಅಖಿಲ ಭಾರತ ಮರಾಠಿ ಸಾಹಿತ್ಯ ಸಮ್ಮೇಳನದಿಂದಖ್ಯಾತ ಲೇಖಕಿ ನಯನತಾರ ಸೆಹಗಲ್‌ ಅವರನ್ನು ಕೈಬಿಟ್ಟಿರುವುಕ್ಕೆ ಶಿವಸೇನಅಸಮಾಧಾನವ್ಯಕ್ತಪಡಿಸಿದೆ.

ಸಾಹಿತ್ಯ ಸಮ್ಮೇಳನದ ಆಯೋಜಕರ ಈ ನಡೆಯು ಸಾಹಿತಿಗಳ ಆತ್ಮಗೌರವಕ್ಕೆ ಧಕ್ಕೆ ಉಂಟುಮಾಡಿರುವುದಲ್ಲದೆ, ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ಯೆ ಮಾಡಿದಂತೆ ಎಂದು ಶಿವಸೇನ ತನ್ನ ಮುಖವಾಣಿ ಸಾಮ್ನಾದಲ್ಲಿ ಹೇಳಿದೆ.

ದೇಶದಲ್ಲಿ ನಡೆಯುತ್ತಿರುವ ಕೋಮುವಾದ, ಅಸಹಿಷ್ಣುತೆ ಹಾಗೂ ಗುಂಪು ದಾಳಿಗಳನ್ನು ಖಂಡಿಸಿ ನಯನತಾರ ಸೆಹಗಲ್‌ ‘ ಪ್ರಶಸ್ತಿ ವಾಪಾಸು’ ಆಂದೋಲನ ನಡೆಸುತ್ತಿದ್ದಾರೆ. 2015ರಲ್ಲಿ ಕೇಂದ್ರ ಸಾಹಿತ್ಯ ಆಕಾಡೆಮಿ ಪ್ರಶಸ್ತಿಯನ್ನು ಮರಳಿಸಿದ್ದಾರೆ. ನಯನತಾರ ಸೆಹಗಲ್‌ ಅವರು ಜವಹಾರಲಾಲ್ ನೆಹರೂ ಅವರ ಸಹೋದರಿಯ ಪುತ್ರಿಯಾಗಿದ್ದಾರೆ.

ADVERTISEMENT

ಯವತ್ಮಲ್‌ ಜಿಲ್ಲೆಯಲ್ಲಿ ಜ 11ರಂದು 92ನೇ ಅಖಿಲ ಭಾರತ ಮರಾಠಿ ಸಾಹಿತ್ಯ ಸಮ್ಮೇಳನವನ್ನು ನಯನತಾರ ಸೆಹಗಲ್‌ ಉದ್ಘಾಟನೆ ಮಾಡಬೇಕಿತ್ತು. ಈ ಸಮಾರಂಭದಲ್ಲಿಮುಖ್ಯಮಂತ್ರಿ ದೇವೇಂದ್ರ ಪಢ್ನಾವೀಸ್‌ ಅವರು ಭಾಗವಹಿಸಲಿದ್ದಾರೆ. ಸಮ್ಮೇಳನದ ಸಂಘಟಕರು ನಯನತಾರ ಅವರನ್ನು ಕೈಬಿಟ್ಟಿರುವುದಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿದೆ.

ಗುಂಪು ದಾಳಿ, ರಾಜಕೀಯ ಹಗೆತನ, ಆಡಳಿತ ಯಂತ್ರ ದುರುಪಯೋಗ, ಪತ್ರಕರ್ತರ ಮೇಲೆ ರಾಜಕೀಯ ಒತ್ತಡ, ಸಾಹತಿಗಳು ಮತ್ತು ಬರಹಗಾರ ಹತ್ಯೆಗಳನ್ನು ಖಂಡಿಸಿ ನಯನತಾರತಮ್ಮ ಭಾಷಣ ಸಿದ್ಧಪಡಿಸಿ ಸಾಹಿತ್ಯ ಸಮ್ಮೇಳನದ ಸಂಘಟಕರಿಗೆ ಕಳುಹಿಸಿಕೊಟ್ಟಿದ್ದರು ಎಂದು ಶಿವಸೇನ ಆರೋಪಿಸಿದೆ.

ಸಂಘಟಕರು ಸರ್ಕಾರದ‍ಪರವಾಗಿ ಕೆಲಸ ಮಾಡಿದ್ದಾರೆ, ನಯನತಾರ ಅವರನ್ನು ಕೈ ಬಿಟ್ಟಿರುವುದು ಅಭಿವ್ಯಕ್ತಿ ಸ್ವಾತಂತ್ರ್ಯದ ಕತ್ತು ಹಿಸುಕಿದಂತಾಗಿದೆ.ರಾಜಕೀಯ ಒತ್ತಡಗಳೇ ನಯನತಾರ ಅವರನ್ನು ಕೈಬಿಡಲು ಕಾರಣ ಎಂದು ಶಿವಸೇನಾ ವರಿಷ್ಠ ಉದ್ದವ್‌ ಠಾಕ್ರೆ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.