ADVERTISEMENT

ಸಲ್ಮಾನ್‌ ಖಾನ್‌ಗೆ ಬೆದರಿಕೆಯೊಡ್ಡಿದ್ದವರಿಂದ ಕ್ಷಮೆಯಾಚನೆ ಸಂದೇಶ

ಪಿಟಿಐ
Published 22 ಅಕ್ಟೋಬರ್ 2024, 14:23 IST
Last Updated 22 ಅಕ್ಟೋಬರ್ 2024, 14:23 IST
ಸಲ್ಮಾನ್‌ ಖಾನ್
ಸಲ್ಮಾನ್‌ ಖಾನ್   

ಮುಂಬೈ: ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ಗೆ ₹5ಕೋಟಿ ಬೇಡಿಕೆಯ ಬೆದರಿಕೆ ಸಂದೇಶ ಕಳುಹಿಸಿದ್ದ ಮೊಬೈಲ್‌ ಫೋನ್‌ ಸಂಖ್ಯೆಯಿಂದಲೇ ಮುಂಬೈ ಸಂಚಾರ ಪೊಲೀಸರಿಗೆ ಕ್ಷಮೆಯಾಚನೆಯ ಸಂದೇಶ ಬಂದಿದೆ.

ಸಂಚಾರ ಪೊಲೀಸರ ವಾಟ್ಸ್‌ಆ್ಯಪ್‌ ಸಹಾಯವಾಣಿಗೆ ಸೋಮವಾರ ಕ್ಷಮೆಯಾಚನೆಯ ಸಂದೇಶ ಬಂದಿದೆ ಎಂದು ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದರು.

ಬೆದರಿಕೆ ಸಂದೇಶ ಕಳುಹಿಸಿದ್ದ ಮೊಬೈಲ್‌ ಫೋನ್‌ ಸಂಖ್ಯೆಯಿಂದಲೇ ಕ್ಷಮೆಯಾಚನೆಯ ಸಂದೇಶವೂ ಬಂದಿದೆ ಎಂಬುದು ತನಿಖೆಯ ಸಮಯದಲ್ಲಿ ದೃಢಪಟ್ಟಿದೆ ಎಂದು ಅವರು ಹೇಳಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.